ಮೈಸೂರು: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮೈಸೂರು ಚಿತ್ ಅಯಿತು.ಆದರೂ ಬಿಸಿಲ ಬೇಗೆಯಿಂದ ಬಳಲಿದ್ದ ಜನತೆಗೆ ಖುಷಿ ತಂದಿದೆ.
ಏಕಲವ್ಯನಗರದಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದರೆ ಕೆಲವೆಡೆ ಗೋಡೆಗಳು ಕುಸಿದಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಕೂಲಿ ಕೆಲಸಕ್ಕೆ ಹೋಗಿ ಹಿಂದಿರುಗಿ ಬರುವ ವೇಳೆಗೆ ಮನೆ ಕುಸಿದುಬಿದ್ದಿದೆ.
ಹಾನಿಯಾದ ಮನೆಯಲ್ಲೇ ಅನಿವಾರ್ಯವಾಗಿ ದಂಪತಿ ಇಡೀರಾತ್ರಿ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ.
ಹಲವಾರು ವರ್ಷಗಳಿಂದ ಹೀನಾಯ ಪರಿಸ್ಥಿತಿಯಲ್ಲಿ ಕಾಲ ದೂಡುತ್ತಿರುವ ಇಲ್ಲಿನ ನಿವಾಸಿಗಳ ನೆರವಿಗೆ ಸರ್ಕಾರ ಸ್ಪಂದಿಸಿಲ್ಲ, ಸೂರು ಕಲ್ಪಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಳಲು ತೋಡಿಕೊಂಡರು.

ಮತ್ತೆ ಮಳೆಯಾಗುವ ಮುನ್ನ ಸಂಭಂಧಪಟ್ಟ ಅಧಿಕಾರಿಗಳು ಏಕಲವ್ಯನಗರ ನಿವಾಸಿಗಳ ನೆರವಿಗೆ ಧಾವಿಸಲಿ.
ಉರುಳಿದ ಮರ: ನಗರದ ಸಿದ್ದಾರ್ಥ ಲೇಔಟ್ ನಲ್ಲಿ ಶನಿವಾರ ಮಧ್ಯಾಹ್ನ ಸುಮಾರು 12.35 ರ ಸಮಯದಲ್ಲಿ ದೊಡ್ಡ ಮರವೊಂದು ಇದ್ದಕ್ಕಿದ್ದಂತೆ ಉರುಳಿ ಬಿದ್ದಿದೆ.
ವಿನಯ ಮಾರ್ಗದ ತಿರುವಿನಲ್ಲಿ ಮರ ಕರೊಂದರ ಮೇಲೆಯೇ ಬಿದ್ದಿದೆ.ಅದೃಷ್ಟವಶಾತ್ ಕಾರ್ ನಲ್ಲಿ ಯಾರೂ ಇರಲಿಲ್ಲ.ಆದರೆ ಕಾರು ಜಕಂಗೊಂಡಿದೆ.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ ಸಧ್ಯ ಆ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳಾಗಲಿ ಅಥವಾ ನಡೆದು ಹೋಗುವವರಾಗಲಿ ಅಲ್ಲಿ ಇರದ ಕಾರಣ ಅನಾಹುತ ತಪ್ಪಿದಂತಾಗಿದೆ.
ಮರವನ್ನು ತೆರವುಗೊಳಿಸಲಾಗುತ್ತಿದೆ.

