ಮಸೀದಿಗಳಿಗೆ ನೋಟೀಸ್ ಕೊಡದೆ ಸರ್ಕಾರ ಅನ್ಯಾಯ ಮಾಡಿದೆ -ಮುತಾಲಿಕ್

ಮೈಸೂರು: ಮೈಕ್ ಹಾಕುವ ದೇವಸ್ಥಾನಗಳಿಗೆ ನೋಟಿಸ್ ನೀಡುವ ಸರ್ಕಾರ ಮಸೀದಿಗಳಿಗೆ  ನೋಟೀಸ್ ಕೊಡದೆ ಅನ್ಯಾಯ ಮಾಡಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.

ಶಿವರಾಮ ಪೇಟೆಯಲ್ಲಿರುವ ತ್ರಿಪುರ ಭೈರವಿ ಮಠದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಓಂಕಾರ ದೊಂದಿಗೆ ಹನುಮಾನ್ ಚಾಲೀಸ ಪಠಣಕ್ಕೆ ಚಾಲನೆ ನೀಡಿ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಬಿಜೆಪಿ ಸರಕಾರದ ನಡೆ‌ ಸರಿ ಇಲ್ಲ, ಈ ಸರ್ಕರಕ್ಕೆ ದಿಕ್ಕಾರ ಇರಲಿ ಎಂದು ಕಿಡಿಕಾರಿದರು.

ಸರ್ಕರ ಮಾಡುತ್ತಿರುವುದು ನ್ಯಾಯಾನಾ, ದೇವಸ್ಥಾನಗಳಲ್ಲಿ ಸುಪ್ರಭಾತಕ್ಕೆ ವಿರೋಧ ಮಾಡುತ್ತಾರೆ. ಅದೇ ಮಸೀದಿಗಳಲ್ಲಿ ಆಜಾನ್ ಕೂಗಲು ಅವಕಾಶ ಕೊಡುತ್ತಾರೆ.

ಆಜಾನ್‍ಗೆ ಅವಕಾಶ ಕೊಟ್ಟು ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಮುಸ್ಲಿಂರ ಹಠದಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ತಾಲಿಬಾನ್ ಅಲ್ಲ, ಪಾಕಿಸ್ತಾನ್ ಅಲ್ಲ ಈ ರೀತಿ ಹಠ ಸರಿಯಲ್ಲ ಎಂದು ಹೇಳಿದರು.

ಸಂಘರ್ಷಕ್ಕೆ ನೀವೆ ಅವಕಾಶ ಮಾಡಿ ಕೊಡುತ್ತಿದ್ದೀರಿ,ಸರ್ಕಾರ ನಮ್ಮ ಆಂದೋಲನ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ,ಸುಪ್ರಭಾತ ಹಾಕಲು ಹೋದವರಿಗೆ‌ ತಡೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಗೃಹ ಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡಿ ಹೈಕೋರ್ಟ್ ನಲ್ಲಿ ಕಂಟೆಂಪ್ಟ್ ಆಫ್ ಕೋರ್ಟ್ ಅರ್ಜಿ ದಾಖಲಿಸುತ್ತೇವೆ.ಮಂಗಳವಾರದಿಂದ ನಮ್ಮ ಹೋರಾಟ ಇನ್ನೂ ಉಗ್ರವಾಗಲಿದೆ ಎಂದು ಮುತಾಲಿಕ್ ತಿಳಿಸಿದರು.