ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ -ಕಂಗನಾ

ಮುಂಬೈ: ಯಾವುದೇ ರಾಜ್ಯದಲ್ಲಾಗಲಿ ಭಾಷೆಯ ಬಗ್ಗೆ ಘರ್ಷಣೆ ಸರಿಯಲ್ಲ ಎಂದು ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಭಾಷೆ ವಿವಾದವಾಗಬಾರದು‌ ಹೀಗೆ ವಿವಾದವಾಗುವ ಬದಲು ಸಂಸ್ಕೃತ ವನ್ನೇ ರಾಷ್ಟ್ರ ಭಾಷೆ ಮಾಡಿದರೆ ಒಳ್ಳೆಯದು ಎಂದು ತಿಳಿಸಿದರು.

ಸಂಸ್ಕೃತ ಎಲ್ಲಾ ಭಾಷೆಗಳಿಗೂ ತಾಯಿ ಭಾಷೆ.ಕನ್ನಡ,ತಮಿಳು,ಹಿಂದೆ ಹೀಗೆ ಎಲ್ಲಾ ಭಾಷೆಗಳಲ್ಲೂ ಸಂಸ್ಕೃದ ಪ್ರಭಾವ ಇದ್ದೇ ಇದೆ. ಬಹಳಷ್ಟು ಪದಗಳು ಸಂಸ್ಕೃತದಿಂದ ಬಂದಿವೆ ಹಾಗಾಗಿ ಸಂಸ್ಕೃತವೇ ರಾಷ್ಟ್ರ ಭಾಷೆಯಾಗಲಿ ಎಂದು ಕಂಗನಾ ತಿಳಿಸಿದರು