ಪರೀಕ್ಷೆ ಬರೆಯದಿದ್ದರೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ: ಅಶ್ವಥ್ ನಾರಾಯಣ ವಿರುದ್ಧ ಎಚ್ ಡಿ ಕೆ ಹೊಸ ಬಾಂಬ್

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅಕ್ರಮ ಪರೀಕ್ಷೆ ಎಕ್ಸ್ ಪರ್ಟ್ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ಹಿಂದೆ ಏನೆಲ್ಲಾ ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ ಅವರು ಮಾಡಿದ ಕೆಲಸಗಳಿಗೆ ಅವರಿಗೆ ಬೇರೆಯದೆ ಹೆಸರಿದೆ ಎಂದು ಟೀಕಿಸಿದರು.

ಹಿಂದೆ ನರ್ಸಿಂಗ್ ಟ್ರೈನಿಂಗ್ ಮಾಡಿದ ಬಹಳಷ್ಟು ಮಂದಿಗೆ ಸರ್ಟಿಫಿಕೇಟ್ ಕೊಡಿಸಿದ್ದಾರೆ.ನರ್ಸಿಂಗ್ ಪರೀಕ್ಷೆ ಬರೆಯದಿದ್ದರೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಎಚ್ ಡಿ ಕೆ ಗಂಭೀರ ಆರೋಪ ಮಾಡಿದರು.

ಅದೂ ಎಂತೆಂತಾ ನರ್ಸ್ ಗಳಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಅಬ್ಬಬ್ಬಾ ಎಂದು ಛಾಟಿ ಬೀಸಿದರು.

ಅಶ್ವಥ್ ನಾರಾಯಣ ತಾವು ವಿಶ್ವ ಒಕ್ಕಲಿಗ ಎಂದು ಹೇಳಿಕೊಳ್ಳುತ್ತಾರೆ.ವಿಶ್ವದ ಎಲ್ಲಾ ಒಕ್ಕಲಿಗರು ಇವರ ಸಂಬಂಧಿಕರಂತೆ ಎಂದು ಕುಮಾರಸ್ವಾಮಿ ವ್ಯಂಗ್ಯ ವಾಡಿದರು.

ಈಗ ಪಿ ಎಸ್ ಐ ಹಗರಣದಲ್ಲಿ ಅವರ ಹೆಸರು ಕೇಳಿ ಬಂದಿದೆ, ಇದರಲ್ಲೇನೂ ಅನುಮಾನ ಇಲ್ಲ.ಕೂಡಲೇ ಎಲ್ಲಾ ಸತ್ಯ ಹೊರಬರಬೇಕಿದೆ ಎಂದು ಅವರು ಒತ್ತಾಯಿಸಿದರು.