ಆಜಾನ್ ಗೆ ಪ್ರತಿಯಾಗಿ ಮೇ. 9ರಿಂದ ಹನುಮಾನ್ ಚಾಲೀಸಾ, ಸುಪ್ರಭಾತ ಪಠಣ

ಬೆಳಗಾವಿ: ಮುಸ್ಲಿಂರ ಆಜಾನ್ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಗುಡುಗಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಆಜಾನ್ ಮತ್ತು ಧ್ವನಿವರ್ಧಕದ ವಿರುದ್ಧ ಹಿಂದೂ ದೇವಾಲಯಗಳಲ್ಲಿ ಮೇ. 9ರಿಂದ ಮುಂಜಾನೆ ಹನುಮಾನ್ ಚಾಲೀಸಾ, ಸುಪ್ರಭಾತ ಪಠಣ ಮಾಡಲಾಗುವುದು ಎಂದು ಹೇಳಿದರು.

ಕಿರಿಕಿರಿ ಉಂಟು ಮಾಡುವ ಮತ್ತು ನ್ಯಾಯಾಲಯಗಳ ಆದೇಶಗಳಿಗೆ ವಿರುದ್ಧವಾಗಿರುವ ಆಜಾನ್ ಕೂಗು ಮತ್ತು ಧ್ವನಿವರ್ಧಕಗಳಿಗೆ ಪ್ರತಿಯಾಗಿ ಆಂದೋಲನ ಮಾಡುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ ಮೇ. 9ರಂದು ಸುಮಾರು  1000ಕ್ಕೂ ಹೆಚ್ಚು ದೇವಾಲಯಗಳಲ್ಲಿ ಭಜನೆ, ಹನುಮಾನ್ ಚಾಲೀಸಾ ಪಠಣ, ಸುಪ್ರಭಾತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಘೋಷಿಸಿದರು.

ಮುಸ್ಲಿಂರ ಆಜಾನ್ ಗಿಂತ ದುಪ್ಪಟ್ಟು ಸದ್ದು ಮಾಡಲಾಗುವುದು ಏನು ಕ್ರಮ ಕೈಗೊಳ್ಳುವಿರಿ ಎಂದು ಸರಕಾರಕ್ಕೆ ಸವಾಲ್ ನೀಡಿದರು.

ಮುಸ್ಲಿಂ ರಿಂದ ಬಿಜೆಪಿಗೆ ಒಂದು ಮತ ಬೀಳುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆದರುವುದೇಕೆ. ಮುಸ್ಲಿಂರ ಆಜಾನ್ ಹುಟ್ಟಡಗಿಸಲು ಧೈರ್ಯ ಮಾಡಿ  ಎಂದು ಮುತಾಲಿಕ್ ಸಲಹೆ ನೀಡಿದರು.