ಚರ್ಚೆಗೆ ಗ್ರಾಸ ಒದಗಿಸಿದ ಡಾ.ಅಶ್ವಥ್ ನಾರಾಯಣ -ಎಂ.ಬಿ.ಪಾಟೀಲ್ ಭೇಟಿ ?

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ,ಮಾಜಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ‌ ಡಾ.ಸತ್ಯನಾರಾಯಣ ರಹಸ್ಯವಾಗಿ ಭೇಟಿಯಾಗಿರುವುದು‌ ಚರ್ಚೆಗೆ ಗ್ರಾಸ ಒದಗಿಸಿದೆ.

ಈ ಇಬ್ಬರೂ ಅವರವರ ಪಕ್ಷದಲ್ಲಿ ಭಾರಿ ಪ್ರಭಾವಿಗಳೇ.

ಇವರಿಬ್ಬರ ಭೇಟಿಗೆ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡಿವೆ,ಅಲ್ಲದೆ ರಾಜಕೀಯ‌ ವಲಯದಲ್ಲೂ ಕುತೂಹಲ ಕೆರಳಿಸಿದೆ.

ಆದರೆ ಈ ಭೇಟಿಯನ್ನು‌‌ ಡಾ.ಅಶ್ವಥ್ ನಾರಾಯಣ ‌ನಿರಾಕರಿಸಿದರೆ,ಎಂ.ಬಿ.ಪಾಟೀಲ್ ಮಾತ್ರ ನಾವು ಭೇಟಿಯಾಗಿದ್ದರೆ ತಪ್ಪೇನು‌ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ನನ್ನ ‌ಮಗ ಹಾಗೂ ಅಶ್ವಥ್ ನಾರಾಯಣ ಅವರ ಮಗಳು ವಿದೇಶದಲ್ಲಿ ಒಂದೇ ಕಾಲೇಜಿನ ಸಹಪಾಟಿಗಳು, ನಮ್ಮ ಕುಟುಂಬ‌ ಅವರ ಕುಟುಂಬ ಸ್ನೇಹಿತರು ಹಾಗಾಗಿ‌‌ ಅವರ ಮನೆಗೆ ಹೋಗುತ್ತೇನೆ. ಅವರೂ ಕೂಡಾ ಬರುತ್ತಾರೆ ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

ಆದರೆ ಇತ್ತೀಚೆಗೆ ನಾನು ಅಶ್ವಥ್ ನಾರಾಯಣ ಅವರನ್ನು ಭೇಟಿಯಾಗಿಲ್ಲ ಹಾಗಾಗಿ ಅವರನ್ನು ರಕ್ಷಣೆ ಮಾಡುವ ಮಾತು‌‌ ಎದುರಾಗುವುದೇ ಇಲ್ಲ ಎಂದು ತಿಳಿಸಿದ್ದಾರೆ.

ಈ‌ ಎಲ್ಲಾ ಚರ್ಚೆಗೆ ಮೂಲ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಡಿಸಿದ ಬಾಂಬ್ ಕಾರಣ.

ಸಚಿವ ಅಶ್ವಥ್ ನಾರಾಯಣ ಅವರು ನಮ್ಮ ಪಕ್ಷದ ಮುಖಂಡ ಎಂ.ಬಿ.ಪಾಟೀಲರನ್ನು ಬೇಟಿಯಾಗಿದ್ದಾರೆ.ಅವರು ತಮ್ಮ ಮೇಲೆ ಬಂದಿರುವ ಆರೋಪದಿಂದ ಬಚಾವಾಗಲು ಭೇಟಿಯಾಗಿರಬಹುದು ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.