ನವದೆಹಲಿ: ಮಂಗಳವಾರ ಬೆಳ್ಳಂಬೆಳಿಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಸಂಸದ ಕಾರ್ತಿ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಯುಪಿಎ ಆಡಳಿತಾವಧಿಯಲ್ಲಿ 50 ಲಕ್ಷ ಪಡೆದು 250 ಚೀನಿ ಪ್ರಜೆಗಳಿಗೆ ವೀಸಾ ಸೌಲಭ್ಯ ಕಲ್ಪಿಸಿದ ಆರೋಪದ ಮೇಲೆ ಕಾರ್ತಿ ವಿರುದ್ಧ ಕೇಂದ್ರೀಯ ತನಿಖಾ ದಳ ಹೊಸ ಪ್ರಕರಣ ದಾಖಲಿಸಿದೆ.
ಇದರ ನಡುವೆ ದೆಹಲಿ, ಮುಂಬೈ ಮತ್ತು ಚೆನ್ನೈ ಸೇರಿದಂತೆ 9 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಚೆನ್ನೈನ ಮೂರು, ಮುಂಬೈನ ಮೂರು, ಕರ್ನಾಟಕ, ಪಂಜಾಬ್ ಮತ್ತು ಒಡಿಶಾದಲ್ಲಿ ಶೋಧ ನಡೆಸಲಾಗಿದೆ.
ನಾನು ಎಷ್ಟು ಭಾರಿ ಸಿಬಿಐ ದಾಳಿ ಎಂಬ ಎಣಿಕೆ ಕಳೆದುಕೊಂಡಿದ್ದೇನೆ, ಎಷ್ಟೋ ಬಾರಿ ಆಗಿದೆ ಇದೇನೂ ಹೊಸದಲ್ಲ ಎಂದು ಕಾರ್ತಿ ಚಿದಂಬರಂ ವ್ಯಂಗ್ಯವಾಡಿದ್ದಾರೆ

