ಪರಮಾತ್ಮನನ್ನ ನೋಡಿದಾಗ ಅವನ ಕೃಪೆ ನಮ್ಮ ಮೇಲೆ ಇರುತ್ತದೆ -ಗಣಪತಿಶ್ರೀ

ಮೈಸೂರು: ಪರಮಾತ್ಮನನ್ನ ನೋಡಿದಾಗ ಅವನ ಕೃಪೆ ನಮ್ಮ ಮೇಲೆ‌ ಇರುತ್ತದೆ ಎಂದು ‌ಶ್ರೀ ಗಣಪತಿ ಸಚ್ಚಿದಾನಂದ‌ಸ್ವಾಮೀಜಿ ತಿಳಿಸಿದರು.

ಸ್ವಾಮೀಜಿಯವರ 80ನೆ ಜನ್ಮದಿನೋತ್ಸವದ ಪ್ರಯುಕ್ತ‌‌‌ ವಿವಿಧ ಕ್ಷೇತ್ರಗಳಲ್ಲಿ ‌ಸಾಧನೆ ಮಾಡಿದ‌ ಸಾದಕರನ್ನು ಸನ್ಮಾನಿಸಿ  ನಂತರ‌‌‌ ಶ್ರೀಗಳು ಭಕ್ತರಿಗೆ‌ ಆಶೀರ್ವಚನ ನೀಡಿದರು.

ನಮ್ಮ ಆಶ್ರಮದಲ್ಲಿ ನಾದ, ವೇದ, ಯಾಗ ನಡೆಯುತ್ತಿದೆ. ವಿದ್ಯೆ, ಅನ್ನ ಪ್ರಾಣದಾನ ನಡೆಯುತ್ತಿದೆ ಎಂದು ‌ಹೇಳಿದರು.

ನಾವು ಸೂರ್ಯನನ್ನು ನೋಡಿದಾಗ ಸೂರ್ಯನ ಕಿರಣ ನಮ್ಮ ಮೇಲೆ ಬೀಳುತ್ತದೆ. ಹಾಗೆಯೇ ಚಂದ್ರನನ್ನ ನೋಡಿದಾಗ ಚಂದ್ರನ ಕಿರಣ ನಮಗೆ ಬೀಳುತ್ತದೆ. ಇದೇ ರೀತಿ ಬೆಳಕನ್ನು ನೋಡಿದಾಗ ಬೆಳಕು ಕಾಣುತ್ತದೆ ಎಂದು ನುಡಿದರು.

ಪರಮಾತ್ಮನನ್ನು ನೋಡಿದಾಗ ಅವನ ಕೃಪೆ ನಮಗೆ ಆಗುತ್ತದೆ. ಅದೇ ರೀತಿ ಗುರುವನ್ನು ನೋಡಿದಾಗ ಅವರ ಕೃಪೆ ನಮಗೆ ಸಿಗುತ್ತದೆ ಎಂದು ತಿಳಿಸಿದರು.

ಇಲ್ಲಿ ನಾದ, ವೇದ, ಶಾಸ್ತ್ರ ತುಂಬಿದೆ ಇದನ್ನು ಭಕ್ತರು ಅರಿಯಬೇಕು ಎಂದು ಸ್ವಾಮೀಜಿ ತಿಳಿಸಿದರು.

ಇಂದಿನ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ವೇದನಿಧಿ- ವಿ.ಎಸ್. ಗುರುನಾಥ ಘನಪಾಠಿ, ಚೆನ್ನೈ (ಯಜುರ್ವೇದ   ಮೀಮಾಂಸ), ಶಾಸ್ತ್ರನಿಧಿ- ಶ್ರೀ ದೆಂದುಕೂರಿ ನಾರಾಯಣ ಶರ್ಮ, ವಿಜಯವಾಡ ( ವ್ಯಾಕರಣ, ವೇದಾಂತ, ಮೀಮಾಂಸ,  ನ್ಯಾಯಶಾಸ್ತ್ರ), ನಾದನಿಧಿ- ವಿದ್ವಾನ್. ಮಧುರೈ ಟಿ.ಎನ್. ಶೇಷಗೋಪಾಲನ್, ಚೆನ್ನೈ (ಕರ್ನಾಟಕ ಸಂಗೀತ), ನಾದನಿಧಿ- ವಿ.ಮನ್ನಾರ್ಗುಡಿ ಎ.ಈಶ್ವರನ್, ಚೆನ್ನೈ (ಮೃದಂಗ), ಆಸ್ಥಾನ ವಿದ್ವಾನ್-  ಶ್ರೀ ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್, ತೆನಾಲಿ (ಶೈವಾಗಮ), ಆಸ್ಥಾನ ರಚಯಿತ -‌ ಶ್ರೀ ನಾಗತಿಹಳ್ಳಿ ರಮೇಶ್, ಬೆಂಗಳೂರು (ಬರಹಗಾರರು) ಇವರುಗಳನ್ನು ‌ಸನ್ಮಾನಿಸಿ ಗೌರವಿಸಲಾಯಿತು.

ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.