ಮೈಸೂರು: ಎಸ್.ಡಿ.ಪಿ.ಐ ಅಧ್ಯಕ್ಷನ ಹೇಳಿಕೆಯನ್ನು ವಿರೋಧಿಸುತ್ತೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಮೈಸೂರಲ್ಲಿ ಶನಿವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಸ್ ಡಿಪಿಐ ಅಧ್ಯಕ್ಷ ಮಳಲಿ ಮಸೀದಿಯ ಒಂದು ಸಣ್ಣ ಮರಳನ್ನೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿ ಎಸ್.ಡಿ.ಪಿ.ಐ ಅಧ್ಯಕ್ಷನ ಈ ಹೇಳಿಕೆಯನ್ನು ವಿರೋಧಿಸುತ್ತೇನೆ ಎಂದರು.
ತಾಂಬೂಲ ಶಾಸ್ತ್ರದ ಪ್ರಕಾರ ಮಳಲಿ ದೇವಸ್ಥಾನ ವೀರಶೈವ ಲಿಂಗಾಯತ ಸುಮದಾಯಕ್ಕೆ ಸೇರಿದ್ದು. ಮಸೀದಿ ಸ್ಟ್ರಕ್ಚರಲ್ ನೋಡಿದರೆ ಗೊತ್ತಾಗುತ್ತೆ. ಮಳಲಿ ದೇವಸ್ಥಾನ ಒಂದೇ ಅಲ್ಲ. ದೇಶದಾದ್ಯಂತ ದೇವಸ್ಥಾನ ಒಡೆದು ಮಸೀದಿಗಳನ್ನು ಕಟ್ಟಿರುವುದನ್ನು ಕಾನೂನು ಪ್ರಕಾರ ತೆಗೆದು ಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕಾನೂನು ಪ್ರಕಾರವೇ ನಾವು ದೇವಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಇಲ್ಲಿರುವ ಮುಸ್ಲಿಂ ಅಫ್ಘಾನಿಸ್ತಾನ ಅಥವಾ ಇನ್ನೊಂದು ದೇಶದಿಂದ ಬಂದಿದ್ದಲ್ಲ. ನೀವು ಹಿಂದುಸ್ತಾನ್ ನಲ್ಲೇ ಇರೋದು. ನೀವು ಭಾರತೀಯರು. 30 ಸಾವಿರ ದೇವಸ್ಥಾನ ಒಡೆದು ಮಸಿದಿ ಕಟ್ಟಿದ್ದೀರಿ, ನಿಮ್ಮ ರೀತಿಯಲ್ಲಿ ದಾಳಿ ಮಾಡಿ ನಾವು ತೆಗದುಕೊಳ್ಳುವುದಿಲ್ಲ. ತಾಂಬೂಲ ಶಾಸ್ತ್ರ, ಅಷ್ಟ ಮಂಗಳ ಇದು ವೈಜ್ಞಾನಿಕವಾಗಿದೆ. ಒದ್ದು ಒಳಗಾಗ್ತೀನಿ ಅಂದವನು ಸರ್ವ ನಾಶ ಆಗ್ತಾನೆ. ತಾಂಬೂಲ ಶಾಸ್ತ್ರ ಇದನ್ನು ಪ್ರಶ್ನೆ ಮಾಡಿದ ಆ ವ್ಯಕ್ತಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಹಿಜಾಬ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಹಿಜಾಬ್ ಮುಗಿದಿತ್ತು, ಈವಾಗ ಮತ್ತೆ ಎತ್ತಿರುವುದರ ಹಿಂದೆ ಹಿಡನ್ ಅಜೆಂಡಾ ಇದೆ. ಗಲಭೆ ಸೃಷ್ಟಿಸಲು ಸಂಚು ನಡೆಯುತ್ತಿದೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.

