ಬೆಂಗಳೂರು: ರಾಜ್ಯದಲ್ಲಿ ಬೆಳ್ಳಂ ಬೆಳಗ್ಗೆ ಬಿಸಿನೆಸ್ ಮೆನ್ ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ರಾಜ್ಯಾದ್ಯಂತ ಏಕಕಾಲದಲ್ಲಿ 30ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಅಕ್ರಮ ಆಸ್ತಿ ಕುರಿತು ಶೋಧ ನಡರಸಿದ್ದಾರೆ.
೬೦೦ಕ್ಕು ಹೆಚ್ಚು ಅಧಿಕಾರಿಗಳ ತಂಡ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತು.
ಆದಾಯ ಮರೆಮಾಚಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವುದನ್ನು ಪತ್ತೆ ಮಾಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆಗಳ ಮೇಲೆ ಸರ್ಚ್ ವಾರೆಂಟ್ ತಂದು ದಾಳಿ ಮಾಡಲಾಗಿದೆ
ಗೋವಾ – ಕರ್ನಾಟಕ ಅಧಿಕಾರಿಗಳ ತಂಡದ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿದರು.
ದಾಳಿ ವೇಳೆ ಐಟಿ ಅಧಿಕಾರಿಗಳು ಲೆಕ್ಕಪತ್ರಗಳ ಶೋಧನೆ ನಡೆಸಿದ್ದಾರೆ.
ಬೆಂಗಳೂರಿನಲ್ಲೂ ದಾಳಿ : ಬೆಂಗಳೂರಿನ ಸದಾಶಿವನಗರದ ಎಂಬೆಸ್ಸಿ ಆರ್ಕೆಡ್ ಅಪಾರ್ಟ್ ಮೆಂಟ್ ಫ್ಲಾಟ್ ಮೇಲೂ ಕೂಡಾ ಐಡಿ ಅಧಿಕಾರಿಗಳು ದಾಳಿ ನಡೆಸಿದರು
ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಂಬರ್ ೬೦೨ ರ ಮೇಲೆ ದಾಳಿ ನಡೆದಿದೆ.
ನರಪತ್ ಸಿಂಗ್ ಚರೋಡಿಯ ಎಂಬುವರ ಫ್ಲ್ಯಾಟ್ ಮೇಲೆ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿ ಶೋಧ ಕಾರ್ಯ ಮಾಡಿತು.

