ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆ ಸಂಬಂಧ ನಾವು ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಮಾತನಾಡಿಲ್ಲ. 32 ಶಾಸಕರನ್ನ ನಂಬಿ ಅಭ್ಯರ್ಥಿಯನ್ನ ಹಾಕಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ‍್ಧಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ದೇನೆ ಆರೋಗ್ಯದ ತಪಾಸಣೆಗಾಗಿ ಸಿಂಗಾಪುರಕ್ಕೆ ಹೋಗಿದ್ದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ದೂರಿದರು.
ನಮ್ಮ ಪಕ್ಷದಲ್ಲಿ 32 ಶಾಸಕರಿದ್ದಾರೆ. ಕೆಲವರಿಗೆ ಅಸಮಾಧಾನವಿದೆ. ಆದರೂ ಅವರ್ಯಾರೂ ಜೆಡಿಎಸ್ ವಿರುದ್ದ ಮತ ಹಾಕುವುದಿಲ್ಲ. 32 ಮತಗಳು ನಮ್ಮ ಜೆಡಿಎಸ್ ಗೆ ಬೀಳುತ್ತೆ ಎಂದು ತಿಳಿಸಿದರು.
2016ರಲ್ಲಿ ಅಡ್ಡಮತದಾನವಾಗಿತ್ತು. ಈ ಹಿಂದೆ ಅಡ್ಡ ಮತದಾನ ಮಾಡಿದಂತೆ ಈ ಬಾರಿ ನಡೆಯುವುದಿಲ್ಲ. ಈ ಬಾರಿ ಅಡ್ಡಮತದಾನ ಮಾಡಲ್ಲ. ಎಂದು ಪ್ರಶ್ನೆಯೊಂದಕ್ಕೆ ಎಚ್ ಡಿ ಕೆ ಉತ್ತರಿಸಿದರು.
ಸಿದ್ಧರಾಮಯ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ್ರೋ ಅಥವಾ ಅವರೇ ಹೊಡೆದುಕೊಂಡ್ರೋ ಅಂತಾ ಜೂನ್ 10ರ ಫಲಿತಾಂಶದ ಬಳಿಕ ಗೊತ್ತಾಗುತ್ತೆ ಎಂದು ಅವರು ಟಾಂಗ್ ನೀಡಿದರು.

