ವಿಶ್ವ ಪರಿಸರ ದಿನಾಚರಣೆ ತುಳಸಿಗಿಡ ವಿತರಣೆ

ಮೈಸೂರು :ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವೆಂಕಟೇಶ್ವರ ದೇವಾಲಯದಲ್ಲಿ ಸಾರ್ವಜನಿಕರಿಗೆ ತುಳಸಿ ಗಿಡವನ್ನು ವಿತರಿಸಲಾಯಿತು.

ಗಿಡಗಳನ್ನು ವಿತರಿಸಿ ಮಾತನಾಡಿದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ತುಳಸಿ ಮಹಿಮೆ ಬಗ್ಗೆ
ವಿವರಿಸಿದರು.

ಪ್ರತಿಯೊಬ್ಬ ಮನುಷ್ಯನು ಕೂಡ ಐದು ಗಿಡವನ್ನು ಆದರೂ ಬೆಳೆಸಬೇಕೆಂದು ಶಾಸ್ತ್ರದಲ್ಲಿ ಹೇಳಿದೆ. ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಒಂದು ತುಳಸಿ ಗಿಡವನ್ನು ಆದರೂ ಬೆಳೆಸಬೇಕೆಂದು ಸ್ವಾಮೀಜಿ ಅವರು ಕರೆ ನೀಡಿದರು.

ಸಾಕಷ್ಟು ಕಾಯಿಲೆಗಳಿಗೆ ತುಳಸಿಗಿಡ ಔಷಧಿ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಶ್ರೀಗಳು ವಿವರಿಸಿದರು.

ಮನೆಯಲ್ಲಿ ಬೆಳೆಸಿ ಮಹಿಮೆಯ ತುಳಸಿ ಶೀರ್ಷಿಕೆಯಡಿಯಲ್ಲಿ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಎಲ್ಲರೂ ಕೂಡ ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸಬೇಕೆಂದು ಶ್ರೀಗಳು ಈ  ಕರೆ ನೀಡಿದರು.
ದೇವಸ್ಥಾನದ ಆವರಣದಲ್ಲಿ  2000 ತುಳಸಿ ಸಸಿಗಳನ್ನು ವಿತರಿಸಲಾಯಿತು.