ಸೀಳು ನಾಯಿಗಳಿಗೆ ಹೋಲಿಕೆ: ವೈರಲ್ ಆಯ್ತು ಸಿದ್ದು ಮಾತು

ಮೈಸೂರು: ತಮ್ಮ ಪ್ರತಿಕ್ರಿಯೆಗಳಿಗೆ ಹೇಳಿಕೆ ನೀಡುವವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸೀಳುನಾಯಿಗಳಿಗೆ ಹೋಲಿಕೆ ಮಾಡಿದ್ದಾರೆ. 

ನಾನೊಬ್ಬ ಮಾತನಾಡಿದರೆ ಸೀಳುನಾಯಿಗಳ ತರ ಇಪ್ಪತ್ತೈದು ಜನ ಮುಗಿ ಬೀಳತ್ತಾರೆ. ನಮ್ಮವರು ಯಾರೂ ಮಾತಾಡಲ್ಲ ಎಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪದವೀಧರ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ  ಈ ಕುರಿತು ಪ್ರಸ್ತಾಪಿಸಿದ್ದರು.

ನಾನೊಬ್ಬ ಮಾತನಾಡಿದರೆ ಅವರೆಲ್ಲ ಸೀಳುನಾಯಿಗಳ ರೀತಿ ನನ್ನ  ಮೇಲೆ ಬೀಳುತ್ತಾರೆ. ಆದರೆ ನಮ್ಮವರು ಯಾರೂ ತಿರುಗಿ ಮಾತಾಡಲ್ಲ. ಇದೇ ತಾಪತ್ರಯ ಬಂದಿರೋದು ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಮೂಲಕ ನಮ್ಮ ಪಕ್ಷದಲ್ಲೇ ನನಗೆ ಬೆಂಬಲ ಸಿಗುತ್ತಿಲ್ಲವೆಂದು ಪರೋಕ್ಷವಾಗಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.