ರಾಜ್ಯಸಭೆ ಚುನಾವಣೆ-ಬಿಜೆಪಿ ಭರ್ಜರಿ ಗೆಲುವು, ಕಾಂಗ್ರೆಸ್ ಗೆ ಒಂದು‌ ಸ್ಥಾನ, ಜೆಡಿಎಸ್ ಗೆ ಮುಖಭಂಗ

ಬೆಂಗಳೂರು: ಅತೀವ ಕುತೂಹಲ ಕೆರಳಿಸಿದ್ದ  ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಕಾಂಗ್ರೆಸ್ ಗೆ ಒಂದು ಸ್ಥಾನ ಲಭಿಸಿದ್ದು ಜೆಡಿಎಸ್ ಗೆ ತೀವ್ರ ಮುಖಬಂಗವಾಗಿದೆ.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಫಲಿತಾಂಶ ಪ್ರಕಟಣೆಗೂ ಮೊದಲೇ  ಖಚಿತವಾಗಿತ್ತು.

4ನೇ ಸ್ಥಾನ ಯಾರಿಗೆ ಎಂಬುದು ಮಾತ್ರ ಕುತೂಹಲಕ್ಕೆ ಎಡೆ ಮಾಡಿತ್ತು.

ಮತ ಎಣಿಕೆ ಬಹಳ ತಡವಾದುದರಿಂದ ಫಲಿತಾಂಶ ಪ್ರಕಟಣೆ ಕೂಡಾ ತಡವಾಯಿತು.

ನಿರ್ಮಲಾಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲಿ 46, ಜಗ್ಗೇಶ್ 44, ಕಾಂಗ್ರೆಸ್ ಜೈರಾಮ್ ರಮೇಶ್ ಅವರಿಗೆ 46 ಮತಗಳು ವಾಗಿದ್ದರಿಂದ ಈ ಮೂವರು ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದಾರೆ.

ಆದರೆ ಇಡೀ ಚುನಾವಣೆಯ ಚಿತ್ತವನ್ನು ಕೆರಳಿಸಿದ್ದ 4ನೇ ಸ್ಥಾನ ಯಾರಿಗೆ ಎಂಬುದು ನಿಗೂಢವಾಗಿತ್ತು.

ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್, ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು.

ಜೆಡಿಎಸ್‍ನ ಇಬ್ಬರ ಮತದಾರರ ಕ್ರಾಸ್ ಓಟಿಂಗ್ ಆಗಿದೆ.

ಬಿಜೆಪಿಯ 2ನೇ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಬಿಜೆಪಿಯ ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ.

ಇನ್ನು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬ್ಯಾಲೆಟ್ ಪೇಪರ್‍ನಲ್ಲಿ ಯಾರಿಗೂ ಮತ ಹಾಕದೆ ಖಾಲಿ ಬಿಟ್ಟಿದ್ದಾಗಿ ಹೇಳಿಕೊಂಡಿದ್ದರು.ಆದರೆ ಅವರ ಮತ ಬಿಜೆಪಿಗೆ ಲಭ್ಯವಾಗಿರುವುದು ದೃಢಪಟ್ಟಿದೆ.