ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋ ರದ್ದುಗೊಂಡಿದೆ.
ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ಬಂದು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜೊತೆಗೆ ಒಂದು ಹೆಚ್ಚುವರಿ ಕಾರ್ಯಕ್ರಮವನ್ನು ಸೇರ್ಪಡೆ ಮಾಡಲಾಗಿದೆ.
ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್‍ಗೆ ಮೋದಿ ಅವರ ರೋಡ್ ಶೋ ನಡೆಸಬೇಕು ಎಂಬ ರಾಜ್ಯ ಬಿಜೆಪಿ ಆಶಯಕ್ಕೆ ಎಸ್‍ಜಿಪಿ ತಣ್ಣೀರೆರಚಿದೆ.
ರೋಡ್ ಶೋ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ತಿಳಿಸಿದ್ದ ಎಸ್‍ಜಿಪಿ ಭದ್ರತೆ ಕಾರಣದಿಂದ ಅನುಮತಿ ನೀಡಿಲ್ಲ.
ಈ ಮೊದಲು ಸಿದ್ಧವಾಗಿದ್ದ ಕಾರ್ಯಕ್ರಮ ಪಟ್ಟಿಯಲ್ಲಿ ಐಐಎಸ್‍ಸಿ ಕಾರ್ಯಕ್ರಮ ಇರಲಿಲ್ಲ, ಹೊಸದಾಗಿ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ.
ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟಕ್ಕೆ ಆಗಮಿಸಲಿದ್ದು, ಅದಕ್ಕಾಗಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.
ನಂತರ ಹೆಲಿಕಾಪ್ಟರ್ ಮೂಲಕ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಸ್ಸ್ ಯೂನಿವರ್ಸಿಟಿ (ಬೇಸ್)ಗೆ ತೆರಳಲಿದ್ದು, ಅಲ್ಲಿಯೂ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ.

