ಡಿಕೆಶಿ ವಿರುದ್ಧ ಬಿಜೆಪಿ ಕೆಂಡ

ಬೆಂಗಳೂರು- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ನೀವು ಕೂಡಾ ಸಿದ್ದರಾಮಯ್ಯ ಜಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದೀರಾ ಎಂದು ಬಿಜೆಪಿ ಜರಿದಿದೆ.

ಹಿಂದೂ ದೇವ- ದೇವತೆ, ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್‌ಗೆ ಆಶ್ರಯ ನೀಡುವ ಮೂಲಕ ನಿಮ್ಮ ಅಂತರಾಳದಲ್ಲಿ ಇರುವ ಹಿಂದು ವಿರೋಧಿ ನೀತಿಯನ್ನು ಈಗ ಬಹಿರಂಗಪಡಿಸಿದ್ದೀರಿ ಎಂದು ಕುಟುಕಿದೆ.

ಸಿದ್ದರಾಮಯ್ಯ ಒಬ್ಬ ಹಿಂದು ವಿರೋಧಿ. ನೀವೂ ಅವರಂತೆಯೇ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ,ಸೀತಾ ಮಾತೆಗೆ ಅಪಮಾನ ಮಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಪಾದ ಸೇವೆ ಮಾಡುವುದಕ್ಕೆ ನಿಮಗೆ ಎಲ್ಲಿಲ್ಲದ ಖುಷಿ.

ಅದೇ ರೀತಿ ರಾಮಾಯಣಕ್ಕೆ ಅಪಮಾನ ಮಾಡಿದ ಶೈಲಜಾ ಅಮರನಾಥ್ ರಕ್ಷಣೆ ಮಾಡುವುದು ನಿಮ್ಮ ಆದ್ಯತೆಯೇ

ಹಿಂದುಗಳ ಭಾವನೆಗೆ ಧಕ್ಕೆ ತಂದ ನೀವು ಮೊದಲು ರಾಜೀನಾಮೆ ನೀಡಬೇಕು
ಎಂದು ಒತ್ತಾಯಿಸಿದೆ‌.

ಕರಾವಳಿ ಭಾಗದಲ್ಲಿ ಕೋಮು-ಸೌಹಾರ್ದತೆ ಕದಡುವುದಕ್ಕೆ ಡಿಕೆಶಿ ಅವರ ದಂಡು ಸಂಚು ರೂಪಿಸುತ್ತಿದೆ.ನಿಮ್ಮ ಆಶಾಡಭೂತಿತನ‌ ಇನ್ನು ನಡೆಯದು‌.ಹಿಂದೂವಿರೋಧಿ‌ ಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.