ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಮೋದಿ ತಂದಿದ್ದಾರೆ -ಸಿಎಂ ಬಣ್ಣನೆ

ಮೈಸೂರು: ಯೋಗ ಅಂತಾರಾಷ್ಟ್ರೀಯ ದಿನಾಚರಣೆಯಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಬಹಳ ದೊಡ್ಡದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ 8ನೇ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರು.

ಪ್ರಧಾನಿಯವರು ಮೈಸೂರನ್ನು ಅಂತಾರಾಷ್ಟ್ರೀಯ ನಕ್ಷೆಯಲ್ಲಿ ತಂದಿದ್ದಾರೆ. ಯೋಗದಿಂದ ಜಗತ್ತನ್ನೇ ಅವರು ಒಂದುಗೂಡಿಸಿದ್ದಾರೆ ಎಂದು ಮೋದಿಯವರನ್ನು ಸಿಎಂ ಅಭಿನಂದಿಸಿದರು.

ಯೋಗ ಮನಸ್ಸು, ದೇಹವನ್ನು ಒಂದು ಮಾಡುವಂಥದ್ದು. ಅದೇ ರೀತಿ ಜಗತ್ತನ್ನು ಒಂದು ಮಾಡಬಹುದು ಎಂದು ಪ್ರಧಾನ ಮಂತ್ರಿ ನರೇಮದ್ರ ಮೋದಿಯವರು ತೋರಿಸಿಕೊಟ್ಟಿದ್ದಾರೆ.

ಯೋಗದಿಂದ ಆರೋಗ್ಯ ವೃದ್ಧಿ ಆಗಲಿದೆ. ಇದು ದೇಶಕ್ಕೆ ದೊಡ್ಡ ಚರಿತ್ರೆಯಾಗಿದೆ. ಆ ಚಾರಿತ್ರೆ ಕಟ್ಟುವಂತಹ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಅದಕ್ಕಾಗಿ  ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಜಮಾತೆ ಪ್ರಮೋದಾದೇವಿ ಒಡೆಯರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ್ ಸೋನೋವಾಲ್, ಸಚಿವರುಗಳಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.