ಪಕ್ಷಾಂತರ ಕಾಯ್ದೆ ತಿದ್ದುಪಡಿ ಆಗಲಿ -ಸಿದ್ದು ಆಗ್ರಹ

ಮೈಸೂರು: ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ‌ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ‌ಆಪರೇಷನ್‌‌ ಕಮಲ ಮಾಡಿ‌ ಹಾಳುಮಾಡಿದ್ದಾಯಿತು.ಈಗ ಬಿಜೆಪಿ ಮಹಾರಾಷ್ಟ್ರ ‌ಸರ್ಕರವನ್ನು ಉರುಳಿಸಲು ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.

ಮೊದಲು ಪಕ್ಷಾಂತರ  ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತಂದರೆ ಇದಕ್ಕೆಲ್ಲಾ ಕಡಿವಾಣ ಬೀಳಲಿದೆ ಎಂದು ಹೇಳಿದರು.

ಪಕ್ಷಾಂತರ ಮಾಡಿದರೆ 10 ವರ್ಷ ಚುನಾವಣೆಯಲ್ಲಿ ನಿಲ್ಲದಂತೆ ಆಗಬೇಕು,ಪ್ರಜಾಪ್ರಭುತ್ವ ಉಳಿವಿಗೆ ಇದರ ಅವಶ್ಯಕತೆ ಇದೆ ಎಂದು ಸಿದ್ದು ತಿಳಿಸಿದರು.

ಕರ್ನಾಟಕದಲ್ಲಿ ಮೊದಲು ಪಕ್ಷಾಂತರ ‌ಪ್ರಾರಂಭಿಸಿದ್ದೇ ಬಿಜೆಪಿ ಯವರು ಈಗ ಆಪರೇಷನ್ ಕಮಲ‌ ಇಡೀ‌ ದೇಶಕ್ಕೆ ವ್ಯಾಪಿಸಿದೆ ಎಂದು ಕಿಡಿಕಾರಿದರು.

ಭ್ರಷ್ಟಾಚಾರದ ಹಣದಲ್ಲಿ‌‌ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ‌ಸಿದ್ದು ಗಂಭೀರ ‌ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಡಬಲ್ ಇಂಜಿನ್ ಸರ್ಕಾರದ ಗುಣಗಾನ ಮಾಡಿ ಹೋಗಿದ್ದಾರೆ.ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂಬುದು ರಾಜ್ಯ ನಾಯಕರಿಗೇ‌ ಗೊತ್ತಿದೆ‌.ಮೋದಿ ಬರೀ ಸುಳ್ಳು ಹೇಳಿ ಹೋಗಿದ್ದಾರೆ ಎಂದು ಟೀಕಿಸಿದರು.