ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ – ಯೋಗಿ ಅಪಾಯದಿಂದ ಪಾರು

ವಾರಾಣಸಿ: ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷವಾಗಿದ್ದು ಅದೃಷ್ಟವಶಾತ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಾಯದಿಂದ ಪಾರಾಗಿದ್ದಾರೆ.

ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಲಕ್ನೋದಿಂದ ಹೆಲಿಕಾಪ್ಟರ್ ಹೊರಡುತ್ತಿದ್ದಂತೆ ಪಕ್ಷಿ ಡಿಕ್ಕಿ ಹೊಡೆದಿದೆ.

ಅಪಾಯ ತಪ್ಪಿಸಲು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲರಾಜ್ ಶರ್ಮಾ ಹೇಳಿದ್ದಾರೆ.

ಸ್ವಲ್ಪ ಸಮಯ ಕಳೆದು ಹೆಲಿಕಾಪ್ಟರ್ ಸುರಕ್ಷತೆ ಖಚಿತ ಪಡಿಸಿಕೊಂಡು ಲಖನೌಗೆ ಸುಮಾರು 2 ತಾಸು ತಡವಾಗಿ ಯೋಗಿ ತೆರಳಿದ್ದಾರೆ.

ಶನಿವಾರ ವಾರಾಣಸಿಗೆ ಆಗಮಿಸಿದ್ದ ಯೋಗಿ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಅಭಿವೃದ್ಧಿ ಕಾಮಗಾರಿ ಹಾಗೂ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದರು.

ವಾರಣಾಸಿಯಲ್ಲಿ ರಾತ್ರಿ ತಂಗಿದ್ದ ಅವರು ಭಾನುವಾರ ಬೆಳಗ್ಗೆ ಲಖನೌಗೆ ತೆರಳುವಾಗ ಈ ಅವಘಡ ಸಂಭವಿಸಿದೆ ಸಧ್ಯ ಯಾವುದೇ ತೊಂದರೆಯಾಗದಂತೆ ಯೋಗಿ ವಾಪಸಾಗಿದ್ದಾರೆ.