ಚಾರ್ ಧಾಮ್ ಯಾತ್ರೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮರಣ

ಡೆಹರಾಡೂನ್: ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಈ ಬಗ್ಗೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು ಇದಲ್ಲಿ ಹೆಚ್ಚಿನವರು ವೃದ್ದರು ಎಂದು ಸ್ಪಷ್ಟಪಡಿಸಿದೆ.

ವೈದ್ಯಕೀಯ ಚಿಕಿತ್ಸೆ ಹಾಗೂ ಆಹಾರದ ಕೊರತೆ ಎದುರಾದವರೇ ಮೃತಪಟ್ಟಿದ್ದಾರೆ,ಅದರಲ್ಲೂ ಹೃದಯ ಸಂಬಂಧಿ ‌ಕಾಯಿಲೆಯವರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಭಾರೀ ಮಳೆ ಮತ್ತು ಭೂಕುಸಿತಗಳಿಂದಲೂ ಸಾವು ಉಂಟಾಗಿದೆ, ಸುಗಮ ಯಾತ್ರೆಗೆ ಕ್ರಮ ಕೈಗೊಳ್ಳುವದೇ ಅಲ್ಲಿನ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕೇದಾರನಾಥ ಯಾತ್ರೆ ಮಾರ್ಗದಲ್ಲಿ 95, ಬದರಿನಾಥ ಧಾಮದಲ್ಲಿ 51, ಗಂಗೋತ್ರಿಯಲ್ಲಿ 13 ಮತ್ತು ಯಮುನೋತ್ರಿಯಲ್ಲಿ 42 ಯಾತ್ರಿಕರು ಸಾವನ್ನಪ್ಪಿದ್ದಾರೆ.