ನವದೆಹಲಿ: ಜನಸಾಮಾನ್ಯರಿಗೆ ಸರ್ಕಾರಗಳು ಗಾಯದ ಮೇಲೆ ಬರೆ ಎಳೆಯತ್ತಲೇ ಇದ್ದು, ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳನ್ನು (19 ಕೆಜಿ) ತೆಗೆದುಕೊಳ್ಳುವ ಭದ್ರತಾ ಠೇವಣಿ ಸುಂಕವನ್ನು ಹೆಚ್ಚಿಸಿವೆ.
ಹೊಸ ದರಗಳು ಜೂನ್ 28 ರಿಂದ ಜಾರಿಗೆ ಬಂದಿವೆ.
19 ಕೆಜಿ ಎಸ್‍ಸಿ ವಾಲ್ವ್‍ನೊಂದಿಗೆ ಸಿಲಿಂಡರ್ ನ ಭದ್ರತಾ ಠೇವಣಿ ದರ 1700 ರೂ.ನಿಂದ 2400 ರೂ.ಗೆ, ಸುಂಕ ದರ 1700 ರೂ.ನಿಂದ 2400 ರೂ.ಗೆ ಮತ್ತು ಪ್ಯಾನಲ್ ದರ 2550 ರೂ.ನಿಂದ 3600 ರೂ.ಗೆ ಏರಿಕೆಯಾಗಿದೆ.
47.5 ಕೆಜಿ ಎಸ್‍ಸಿ ವಾಲ್ವ್ ಹೊಂದಿರುವ ಸಿಲಿಂಡರ್ ನ ಭದ್ರತಾ ಠೇವಣಿ ದರ 4300 ರಿಂದ 4900 ರೂ.ಗೆ, ಸುಂಕ ದರ 4300 ರೂ.ನಿಂದ 4900 ರೂ.ಗೆ ಮತ್ತು ಪ್ಯಾನಲ್ ದರ 6450 ರೂ.ನಿಂದ 7350 ರೂ.ಗೆ ಏರಿಕೆಯಾಗಿದೆ.

