ಜುಲೈ ಒಂದರಿಂದ ಗ್ರಾಹಕರಿಗೆ ವಿದ್ಯುತ್ ಶಾಕ್

ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಮಾಡಿದ್ದಾಯಿತು.ಈಗ ವಿದ್ಯುತ್  ಸರದಿ.

ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ.

ಬೆಲೆ ಏರಿಕೆ ಬಿಸಿ ನಡುವೆ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.

ಜುಲೈ 1ರಿಂದ ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಹೆಚ್ಚಾಗಲಿದೆ.

ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ನು ಮುಂದೆ ಹೆಚ್ಚುವರಿಯಾಗಿ 19 ರೂ ಬದಲು 31 ರೂಪಾಯಿ ಪಾವತಿಸಬೇಕಿದೆ.

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಕಾರಣ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಎಸ್ಕಾಂ, ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕ್ ನಿಂದ ಪ್ರಸ್ತಾವನೆ ಸಲ್ಲಿಸಲು ಅನುಮೋದಿಸಲಾಗಿದೆ.

ಪ್ರತಿ ಯೂನಿಟ್ ಗೆ 38 ರಿಂದ 55 ರೂ. ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು.

ಬೆಸ್ಕಾಂ – 55.28, ಮೆಸ್ಕಾಂ – 38.98, ಸೆಸ್ಕ್ – 40.47, ಹೆಸ್ಕಾಂ – 49.54, ಗೆಸ್ಕಾಂ – 39.36 ಹೆಚ್ಚಿಸಲು ನಿರ್ಧರಿಸಿದ್ದವು.

ಆದರೆ ಸರ್ಕಾರ 31ರೂ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ ಹಾಗಾಗಿ ಅನಿವಾರ್ಯವಾಗಿ ಗ್ರಾಹಕರು ವಿದ್ಯುತ್ ಶಾಕ್ ಅನುಭವಿಸಬೇಕಿದೆ.