ಮೈಸೂರು: ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಯುವಕರ ದಾರಿತಪ್ಪಿಸುತ್ತಿರುವ ಕಾಂಗ್ರೆಸ್ಸಿಗರ ಮಾತಿಗೆ ಯಾರೂ ಕಿವಿಗೊಡಬಾರದೆಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ಮನವಿ ಮಾಡಿದ್ದಾರೆ.
ಜನರ ಮನದಲ್ಲಿ ಕಾಂಗ್ರೆಸ್ ಅಳಿದು ಹೋಗುವ ಭಯದಲ್ಲಿ ವಿನಾಕಾರಣ ವಿರೋಧ ಮಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಪ್ರಾರಂಭಿಸಿರುವ ಅಗ್ನಿಪಥ ಯೋಜನೆಯಡಿ ಯುವಕರು ಒಂದೇ ದಿನಕ್ಕೆ 57 ಸಾವಿರ ಅರ್ಜಿಗಳನ್ನ ಹಾಕಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯುವಕರ ಭವಿಷ್ಯ ನಿರ್ಮಾಣದಲ್ಲಿ ಸದಾ ಮುಂದಿದೆ ಎಂದು ಹೇಳಿದ್ದಾರೆ.
ದೇಶಸೇವೆ ಮಾಡಿ ನಿವೃತ್ತಿಯ ನಂತರ ಎಲ್ಲರಿಗೂ ವಿವಿಧೆಡೆ ಉದ್ಯೋಗ ಸಿಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ.
ಯಾವ ಹಂತದಲ್ಲೂ ಯುವಕರಿಗೆ ಮೋಸವಾಗುವದಿಲ್ಲ, ಕೆಲವರು ಮಾಡುವ ಸುಳ್ಳು ಆರೋಪಗಳನ್ನು ನಂಬಬಾರದು ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಪ್ರಧಾನಿಗಳು ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಯುವಕರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಗೆ ಬೆಂಬಲ ನೀಡಿ ಅರ್ಹತೆ ಪಡೆದಿರುವ ಎಲ್ಲ ಯುವಕರು ಸೈನ್ಯಕ್ಕೆ ಸೇರಿ ಎಂದು ಜೋಗಿ ಮಂಜು ಮನವಿ ಮಾಡಿದ್ದಾರೆ.

