ಮೈಸೂರು: ಮೈಸೂರಿನ ಜಯನಗರ 16ನೇ ಅಡ್ಡ ರಸ್ತೆಯಲ್ಲಿರುವ ಶ್ರೀರಾಮಮಂದಿರದಲ್ಲಿ ಜುಲೈ 2ರಂದು ಸಂಜೆ 4 ಗಂಟೆಗೆ ಶಾಂಕರಸ್ಮೃತಿ ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ ಸ್ತುತಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,
ತಲಕಾಡು ಶುಕಶಂಕರಪೀಠದ ಭಾಗವತೀಯ ಜಗದ್ಗುರು ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮತ್ತು ಶ್ರೀ ಅರ್ಜುನ ಅವಧೂತ ಮಹಾರಾಜ್ ಅವರು ದಿವ್ಯಸಾನಿಧ್ಯ ವಹಿಸುವರು.

ಶ್ರೀಗುರ್ವಷ್ಟಕ, ಗಣೇಶ ಪಂಚಕ, ಕನಕದಾರ ಸ್ತೋತ್ರ, ಸಾದನಾ ಪಂಚಕ ಮತ್ತು ತೋಟಕಾಷ್ಟಕ ಸ್ತೋತ್ರಗಳ ಪಾರಾಯಣ ನಡೆಯಲಿದ್ದು, ಪುರೋಹಿತ ಅರ್ಚಕರಿಂದ ವೇದಬಳಗ, ಮಹಿಳಾ ಭಜನಾ ಮಂಡಳಿ, ಸೇರಿದಂತೆ ಸ್ವಾಮೀಜಿರವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮನವಿ ಮಾಡಿದ್ದಾರೆ.
ಶಾಸಕ ಎಸ್.ಎ ರಾಮದಾಸ್ ಶಾಂಕರಸ್ಮೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್, ಶಾಶ್ವತಿ ಧಾರ್ಮಿಕ ಕ್ರಿಯಾಸಮಿತಿ ವೇದಬ್ರಹ್ಮ ಭಾನುಪ್ರಕಾಶ್ ಶರ್ಮ, ಸಮಾಜಸೇವಕ ಕೆ.ರಘುರಾಂ ವಾಜಪೇಯಿ, ಬ್ರಾಹ್ಮಣ ಧರ್ಮಸಹಾಯ ಸಭಾ ಅಧ್ಯಕ್ಷ ಎನ್. ಶ್ರೀನಿವಾಸ್, ಕರ್ನಾಟಕ ಬ್ರಾಹ್ಮಣ ಮಂಡಳಿ ನಿರ್ದೇಶಕ ಸಿವಿ. ಗೋಪಿನಾಥ್, ಎಂ.ಆರ್ ಬಾಲಕೃಷ್ಣ ಮತ್ತಿತರರು ಭಾಗವಹಿಸಲಿದ್ದಾರೆ

