ನಾನು ಬಡವ ನನ್ನ ಕತ್ತು ಸೀಳಬೇಡಿ -ಮೈಸೂರಿನಲ್ಲಿ ವಿನೂತನ ಅಭಿಯಾನ

ಮೈಸೂರು: ನಾನು ಬಡವ ನನ್ನ ಕತ್ತು ಸೀಳ ಬೇಡಿ.. ಇಂತಹ ಘೋಷ ವಾಕ್ಯದೊಂದಿಗೆ ಮೈಸೂರು ಜಿಲ್ಲೆಯಲ್ಲಿ ಹೊಸ‌ ಅಭಿಯಾನ ಪ್ರಾರಂಭವಾಗಿದೆ.

ಉದಯಪುರದ ಕನ್ಹಯ್ಯಾ ಲಾಲ್ ಸಾಹು ಹತ್ಯೆ ಖಂಡಿಸಿ ಇಂತಹ ವಿನೂತನ‌‌ ಅಭಿಯಾನ ಆರಂಭವಾಗಿದೆ

ಕನ್ಹಯ್ಯ ಹತ್ಯೆ ಖಂಡಿಸಿ ವಿಭಿನ್ನವಾದ ಅಭಿಯಾನದ ಮೂಲಕ ಹೋರಾಟ ಪ್ರಾರಂಭಿಸಲಾಗಿದೆ.

ನಾನು ಬಡವ ನನ್ನ ಕತ್ತು ಸೀಳಬೇಡಿ ಎಂದು ಹಿಂದೂ ಕಾರ್ಯಕರ್ತರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ಹಾಗೂ ಟೀ.ನರಸೀಪುರ ತಾಲೂಕಿನ ಹಿಂದೂ ವ್ಯಾಪಾರಸ್ಥರು ಈ ವಿನೂತನ ಅಭಿಯಾನ ಹಮ್ಮಿಕೊಂಡಿದ್ದಾರೆ.

ಬೀದಿ ಬದಿ ವ್ಯಾಪಾರಸ್ಥರು ಇದಕ್ಕೆ ಸಾಥ್ ನೀಡಿದ್ದಾರೆ.

ನಾನು ಬಡವ ನನ್ನ ಕತ್ತು ಸೀಳಬೇಡಿ ಎಂಬ ನಾಮಫಲಕ‌ ಹಿಡಿದು ವ್ಯಾಪಾರಸ್ಥರು, ಹಿಂದೂ ಕಾರ್ಯಕರ್ತರು ಅಭಿಯಾನ ಮಾಡುತ್ತಿದ್ದಾರೆ.