ಕಡೆಗೂ ಮಹಾ ಸರ್ಕಾರ ಪತನ- ರಾಜೀನಾಮೆ ನೀಡಿದ ಉದ್ದವ್ ಠಾಕ್ರೆ

ಮುಂಬೈ:ಅಂತೂ ಇಂತೂ ಕೊನೆಗೂ ಮಹಾ ಅಘಾಡಿ ಸರ್ಕಾರ ಪತನವಾಗಿದೆ.

ಬುಧವಾರ ರಾತ್ರಿ ಸುಮಾರು 9.40ರ ವೇಳೆಗೆ ಸುಪ್ರೀಂ ಕೋರ್ಟ್ ವಿಶ್ವಾಸ ಮತ ಯಾಚನೆಗೆ ಗ್ರೀನ್ ಸಿಗ್ನಲ್ ನೀಡಿತು.

ರೆಬೆಲ್ ಶಾಸಕರ ತಂಡ ಕೂಡಾ ವಾಪಸಾಗಿತ್ತು.ರೆಬೆಲ್ ಗಳೆಲ್ಲಾ ಒಗ್ಗಟ್ಟಾಗಿದ್ದು ಮುಖ್ಯ ಮಂತ್ರಿ ಉದ್ದವ್ ಠಾಕ್ರೆ ಯವರ ಯಾವುದೇ ಮನವಿಗೂ ಸ್ಪಂದಿಸಲಿಲ್ಲ.

ಗುರುವಾರ ಬೆಳಿಗ್ಗೆ 11ಗಂಟೆಗೆ ವಿಶ್ವಾಸ ಮತ ಯಾಚನೆಗೆ ವಿಶೇಷ ಅಧಿವೇಶನ ಕರೆಯುವಂತೆ ಮಹಾರಾಷ್ಟ್ರ ರಾಜ್ಯಪಾಲರು ಮುಖ್ಯ ಕಾರ್ದರ್ಶಿಯವರಿಗೆ ಸೂಚನೆ ಸಹಾ ನೀಡಿದ್ದರು.

ಆದರೆ ತಮ್ಮ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ‌ಯಾವುದೇ‌ ಮೂಲದಿಂದಲೂ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿತ ಮೇಲೆ ಉದ್ದವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ.

ಮೊದಲು‌ ಸುದ್ದಿಗೋಷ್ಠಿ ಕರೆದ ಉದ್ದವ್ ಠಾಕ್ರೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಒಂದೇ ಎಳೆಯಲ್ಲಿ ತಿಳಿಸಿ ಸೀದಾ ರಾಜ್ಯಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಉದ್ದವ್ ಠಾಕ್ರೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ‌.

ಕೊನೆಗೂ ಮಹಾ ಅಘಾಡಿ ಸರ್ಕಾರ ಪತನವಾಗಿದೆ.ಇನ್ನು ಮಹಾರಾಷ್ಟ್ರಕ್ಕೆ ಯಾರು ಮುಖ್ಯ ಮಂತ್ರಿ ಆಗುತ್ತಾರೆ ಎಂಬುದನ್ನು ನೋಡಬೇಕಿದೆ.

ಮಹಾಪತನಕ್ಕೆ ಕಾರಣರಾದ ಏಕನಾಥ್ ಶಿಂದೆಯೇ ಸಿಎಂ ಆಗುತ್ತಾರೋ ಇಲ್ಲಾ ದೇವೇಂದ್ರ ಪಡ್ನವೀಸ್ ಆಗುತ್ತಾರಾ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ