ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನೂಪುರ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆಯಾಗಿದೆ. ಇಂತವರ ಲೂಸ್ ಟಾಕ್ ನಿಂದ ದೇಶಕ್ಕೆ ಬೆಂಕಿ ಬಿದ್ದಿತು ನೀವು ಭಾವನೆಗಳಿಗೆ ಕಿಡಿ ಹೊತ್ತಿಸಿದ್ದೀರಿ ಎಂದು ಕೋರ್ಟ್ ಕಠಿಣವಾಗಿ ನುಡಿದಿದೆ.
ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನೀವೇ ಕಾರಣ ಎಂದು ನ್ಯಾಯಾಲಯವು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನೂಪುರ್ ಶರ್ಮಾ ಹೇಳಿಕೆಯಿಂದಲೇ ಉದಯಪುರದಲ್ಲಿ ಘಟನೆ ನಡೆಯಿತು. ಬೇಜವಾಬ್ದಾರಿ ಹೇಳಿಕೆಯೇ ಘಟನೆಗೆ ಕಾರಣ. ಹೇಳಿಕೆ ಹಿಂಪಡೆಯುವುದು ಲೇಟಾಯಿತು.
ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ನೂಪುರ್ ಗೆ ಸೂಚಿಸಿದೆ.

