ಮುಂಬೈ: ನಿರೀಕ್ಷೆಯಂತೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನ ಮುಖ್ಯ ಮಂತ್ರಿ
ಏಕನಾಥ್ ಶಿಂದೆ ಅವರು ವಿಶ್ವಾಸಮತ ಸಾಧಿಸಿದ್ದಾರೆ.
ಸೋಮವಾರ ಬೆಳಿಗ್ಗೆ 11ಗಂಟೆಗೆ ವಿಧಾನಸಭಾ ಅಧಿವೇಶನ ಪ್ರಾರಂಭವಾಯಿತು.
ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ವಿಶ್ವಾಸಮತ ಪ್ರಕ್ರಿಯೆಗೆ ಚಾಲನೆ ನೀಡಿದರು.
ನಂತರ ಮುಖ್ಯ ಮಂತ್ರಿ ಏಕನಾಥ್ ಶಿಂದೆ ವಿಶ್ವಾಸಮತ ಯಾಚಿಸಿದರು ಆಗ ಅದನ್ನು ಮತಕ್ಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಏಕನಾಥ್ ಶಿಂದೆ ಅವರಿಗೆ 164 ಮತಗಳು ಲಭ್ಯವಾದುದುರಿಂದ ನಿರಾಯಾಸವಾಗಿ ಅವರು ಗೆಲುವು ಸಾದಿಸಿದಂತಾಯಿತು.
ಮಹಾರಾಷ್ಟ್ರದಲ್ಲಿ ಶಿಂದೆ ಆಡಳಿತ ಪ್ರಾರಂಭವಾಗಿದೆ.
ಇದೇ ವೇಳೆ ಪ್ರತಿಪಕ್ಷದ ನಾಯಕನ ಆಯ್ಕೆಯು ನಡೆಯಿತು.
ಎನ್ ಸಿ ಪಿ ಮುಖಂಡ ಅಜಿತ್ ಪವಾರ್ ವಿಪಕ್ಷ ನಾಯಕನಾಗಿ ಆಯ್ಕೆಯಾದರು.

