ನವದೆಹಲಿ: ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಬರುವಂತೆ ಕಾಳಿ ದೇವತೆ ಸಿಗರೇಟ್ ಸೇದುತ್ತಿರುವ ಪೋಸ್ಟ್ ವೊಂದನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೂಲತಃ ತಮಿಳುನಾಡಿನ ಯುವತಿ ಲೀನಾ ಮಣಿಮೇಕಲೈ ಎಂಬಾಕೆ ಇಂತಹ ಕೆಟ್ಟ ಪೋಸ್ಟ್ ಮಾಡಿದ್ದಾಳೆ.
ಸದ್ಯ ಲೀನಾ ಲಂಡನ್ ನಲ್ಲಿ ವಾಸ ಮಾಡುತ್ತಿದ್ದಾಳೆ. ಈಕೆ ಡಾಕ್ಯುಮೆಂಟರಿ ಚಿತ್ರ ತೆಗೆಯುತ್ತಿದ್ದು, ಅದರ ಪೋಸ್ಟ್ ವೊಂದನ್ನು ಟ್ವಿಟರ್ ನಲ್ಲಿ ಹಾಕಿದ್ದಾಳೆ.
ಕಾಳಿಯ ಒಂದು ಕೈಗೆ ಸಿಗರೆಟ್ ಕೊಟ್ಟಿರುವ ಈಕೆ, ಮತ್ತೊಂದು ಕೈಗೆ ಸಲಿಂಗಿಗಳನ್ನು ಬೆಂಬಲಿಸುವ ಭಿತ್ತಿಪತ್ರ ಕೊಟ್ಟಿದ್ದಾಳೆ.
ಕಾಳಿ ದೇವತೆಯ ಭಾವಚಿತ್ರವನ್ನು ಎಡಿಟ್ ಮಾಡಿ ಲೀನಾ ಇಂತಹಾ ಕೆಟ್ಟ ರೂಪ ಕೊಟ್ಟಿದ್ದಾಳೆ.
ಈ ಪೋಸ್ಟ್ ನೋಡಿತ್ತಿದ್ದಂತೆಯೇ ದೇಶಾದ್ಯಂತ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಹಿಂದೂ ಸಂಘಟನೆಗಳು ಕಿಡಕಾರಿದ್ದು ಲೀನಾಮಣಿ ಮೇಕಲೈ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

