ಮುಂಗಾರು ಅಬ್ಬರ:ಮೈದುಂಬಿ ಹರಿಯುತ್ತಿವೆ ನದಿಗಳು

ಮೈಸೂರು: ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು ಕೆರೆ ,ಕಟ್ಟೆ, ಕಾಲುವೆಗಳು ತುಂಬಿ ಹರಿಯುತ್ತಿವೆ. 
ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ, ಕಪಿಲಾ ನದಿಗಳು ಮೈದುಂಬಿ ಪ್ರವಾಹದ ಭೀತಿ ಎದುರಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲೂ  ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಕೆಆರ್ ಸಾಗರದ ಗರಿಷ್ಠ ಮಟ್ಟ 124.80 ಅಡಿ, ಒಟ್ಟು ಸಾಮರ್ಥ್ಯ 49.452ಟಿಎಂಸಿ, ಗುರುವಾರದ ನೀರಿನ ಮಟ್ಟ 39.298(15.973) ಟಿಎಂಸಿ,  ಕಳೆದ ವರ್ಷ ನೀರಿನ ಮಟ್ಟ 16.25ಟಿಎಂಸಿ ಇತ್ತು.
ಒಳಹರಿವು 33,602(1433)ಕ್ಯೂಸೆಕ್,  ಹೊರಹರಿವು 1460(1306)ಕ್ಯೂಸೆಕ್.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ನದಿಪಾತ್ರದ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಸೂಚನೆ ನೀಡಲಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2,284ಅಡಿ,ಗುರುವಾರದ ನೀರಿನ ಮಟ್ಟ 2276.79 ಅಡಿ, ಒಳಹರಿವು 18,563, ಇಂದಿನ ಹೊರಹರಿವು 1000ಕ್ಯೂಸೆಕ್ .  ಜಲಾಶಯ ತುಂಬಲು ಕೇವಲ 8ಅಡಿಗಳು ಮಾತ್ರ ಬಾಕಿ ಇದೆ.