ಕರ್ನಾಟಕ ಹೆಸರಾಗಿದೆ; ಕನ್ನಡ ಇನ್ನೂ ಹಸಿರಾಗಬೇಕಿದೆ

ಮೈಸೂರು: ಹಸಿರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು  ಕೂಗಿ ಹೇಳಿದ್ದರು ಆಲೂರು ವೆಂಕಟರಾಯರು,ಕರ್ನಾಟಕ ಹೆಸರಾಗಿದೆ -ಆದರೆ ಕನ್ನಡ ಇನ್ನೂ ಹಸಿರಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ವೈ. ಡಿ. ರಾಜಣ್ಣ ಹೇಳಿದರು

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ 143 ನೇ ಜಯಂತಿ ಅಂಗವಾಗಿ ಮನುವನ ಉದ್ಯಾನವನದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ಆಲೂರು ವೆಂಕಟರಾಯರ ಒಂದು -ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಲೂರು ವೆಂಕಟರಾಯರ ಪ್ರತಃಸ್ಮರಣೀಯರು ಅವರು ಮತ್ತೆ ಹುಟ್ಟಿ ಬರಬೇಕಿದೆ ಎಂದು ತಿಳಿಸಿದರು

ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರಕ್ಕೆ ಸ್ವತಂತ್ರ ಪೂರ್ವದಲ್ಲೇ ತಮನ್ನು ಸಮರ್ಪಿಸಿಕೊಂಡವರು

ಆಲೂರು ವೆಂಕಟರಾಯರು.

ಕನ್ನಡ ನಮ್ಮ ಉಸಿರಾಗದ ಹೊರತು ಕನ್ನಡ ಸಂಸ್ಕೃತಿಗೆ ಉಳಿಗಾಲವಿಲ್ಲ ಎಂದು ಮನಗೊಂಡಿದ್ದ  ಆಲೂರರು ಬದುಕಿನ ಉದ್ದಕ್ಕೂ ಕನ್ನಡಕ್ಕಾಗಿ ಕನವರಿಸಿದವರು ಎಂದು ತಿಳಿಸಿದರು.

1907 ರಲ್ಲೇ ಕನ್ನಡ ಗ್ರಂಥ ಕರ್ತರ ಸಮ್ಮೇಳನ ವನ್ನು ಆಯೋಜಿಸಿದ್ದರು ,ಕನ್ನಡಿಗರು ಹೈದರಾಬಾದ್ ಬಾಂಬೆ ಮದ್ರಾಸ್ ಮೈಸೂರು ಪ್ರಾಂತ್ಯದಲ್ಲಿ ಹಂಚಿ ಹೋಗಿದ್ದಾಗ ಆ ಎಲ್ಲಾ ಕನ್ನಡಿಗರು ಕರ್ನಾಟಕದ ಹೆಸರಿನಲ್ಲಿ ಐಕ್ಯವಾಗಬೇಕು

ಕನ್ನಡಿಗರಿಗೊಂದು ಅಸ್ಮಿತೆ   ಇರಬೇಕು ಎಂದು ಹಂಬಲಿಸಿದವರು,ಅವರ ಬದುಕಿನ ಗುರಿ ಕರ್ನಾಟಕದ ಏಕೀಕರಣ ಆ ಮೂಲಕ ವಿಶಾಲ ಕರ್ನಾಟಕ ರಾಜ್ಯದ ಅಸ್ತಿತ್ವ ಆಗಬೇಕು ಎಂಬುದಾಗಿತ್ತು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್ , ಕಾಂಗ್ರೆಸ್ ಮುಖಂಡ ಎನ್. ಎಂ. ನವೀನ್ ಕುಮಾರ್ ಮಾತನಾಡಿದರು.

ನಗರ ಪಾಲಿಕೆ ಸದಸ್ಯರಾದ ಸೌಮ್ಯಾ ಉಮೇಶ್, ಜಗದೀಶ್, ವಕೀಲರ ಸಂಘದ ಕಾರ್ಯದರ್ಶಿ ಉಮೇಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ಅಪೂರ್ವ ಸುರೇಶ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಶಿವರಾಜ್ ,ರಾಕೇಶ್ ಕುಂಚಿಟಿಗ ,ಸುಚೀಂದ್ರ ,ಚೇತನ್ ಕಾಂತರಾಜು ,ರಂಗನಾಥ್, ಚಕ್ರಪಾಣಿ ,ಪುರುಷೋತ್ತಮ್ ,ಶಿವಕುಮಾರ್ ,ಜೀವನ್ ,ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.