ಎಚ್ ಡಿ ಕೋಟೆ: ಎಚ್ ಡಿ ಕೋಟೆ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿದೆ.
ಭಾನುವಾರ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಗಾಬರಿಗೊಂಡಿದ್ದರು.
ಹುಲಿಯನ್ನು ಹುಡುಕುವ ಕಾರ್ಯಕ್ಕೆ ಆನೆ ಭೀಮ ಹಾಗೂ ಶ್ರೀಕಂಠ ಎಂಬ ಆನೆಗಳನ್ನು ಬಳಸಿಕೊಳ್ಳಲಾಗಿದೆ.
ಈ ಆನೆಗಳ ಸಹಾಯದಿಂದ ಸೋಮವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಸಿ. ಎಫ್. ಕಮಲ ಕರಿಕಾಳನ್ ಮತ್ತು ಎ ಸಿ ಎಫ್ ಶಿವರಾಂ, ಆರ್ ಎಫ್ ಒ ಮಧು, ವೈದ್ಯರಾದ ಪ್ರಕಾಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಜಿಟಿ,ಜಿಟಿ ಮಳೆಯನ್ನೂ ಲೆಕ್ಕಿಸದೆ ಅರಣ್ಯಾಧಿಕಾರಿಗಳು
ಮತ್ತು ಸಿಬ್ಬಂದಿ ಹುಲಿ ಹಿಡಿಯುವ ಕಾರ್ಯದಲ್ಲಿ ತೊಡಗಿರುವುದು ವಿಶೇಷವೇ ಸರಿ

