ನನಗೆ ಕಾಂಗ್ರೆಸ್ ಉತ್ಸವ ಬೇಕು -ಡಿಕೆ ಶಿವಕುಮಾರ್

ಬೆಂಗಳೂರು: ನನಗೆ ಕಾಂಗ್ರೆಸ್ ಉತ್ಸವ ಬೇಕು, ಬೇರೆ ಯಾವ ಉತ್ಸವವೂ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ಸಿದ್ದರಾಮೋತ್ಸವ ನಂತರ ಶಿವಕುಮಾರೋತ್ಸವ ಮಾಡುವಂತೆ ತಮ್ಮ ಬೆಂಬಲಿಗ ರಾಜು ಬಹಿರಂಗ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಡಿಕೆಶಿ ಮಾಧಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದರು.

ಅಭಿಮಾನಿಗಳು ಏನು ಹೇಳ್ತಾರೋ ಅದು ಅವರಿಗೆ ಬಿಟ್ಟಿದ್ದು. ನನಗೆ ಕಾಂಗ್ರೆಸ್ ಉತ್ಸವ ಬೇಕು ಬೇರೆ ಉತ್ಸವ ಬೇಡ ಎಂದು ಹೇಳಿದರು.

ನನ್ನ ಪೂಜೆ ಯಾರೂ ಮಾಡಬೇಡಿ. ಪಕ್ಷದ ಪೂಜೆ ಮಾಡಿ. ನನಗೆ ಯಾವ ಉತ್ಸವವೂ ಬೇಡ. ಕಾಂಗ್ರೆಸ್ ಉತ್ಸವ ಮಾಡಲಿ ಎಂದವರು ತಿಳಿಸಿದರು.