ಮೈಸೂರು: ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿರುವ ಕುರಿತು ಪ್ರಧಾನಿ ಮೋದಿ ಜನರ ಭಾವನೆಗೆ ಸ್ಪಂದಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ದೇವಿ ದರ್ಶನ ಪಡೆದು ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಬುಧವಾರ ಜಿಎಸ್ ಟಿ ಸಂಬಂಧ ಸಭೆ ನಡೆಯಲಿದೆ. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ಕಡಿಮೆ ಮಾಡಬಹುದು. ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆ ಅರ್ಥವಾಗುತ್ತೆ ಎಂದು ತಿಳಿಸಿದರು.
ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈ ಸೇರಿಲ್ಲ. ನೆರೆ ಸಂಪೂರ್ಣ ತಗ್ಗಿದ ಮೇಲೆ ನಷ್ಟದ ಬಗ್ಗೆ ಗೊತ್ತಾಗುತ್ತೆ ಪ್ರವಾಹ ತಗ್ಗುವವರೆಗೂ ಹಾನಿ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಸ್ತೆ ಸೇತುವೆ ಹಾನಿ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ ಪ್ರವಾಹದಿಂದ ನನ್ನ ಜಿಲ್ಲೆಯಲ್ಲೂ ಸಹ ಸಾಕಷ್ಟು ಬೆಳೆ ಹಾನಿಯಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

