ಮೈಸೂರು: ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಾನೊಂದು ತೀರಾ ನೀನೊಂದು ತೀರ ಆಗಿದ್ದಾರೆ.ಮೊದಲು ಅವರ ಪ್ಲೇಟ್ ನಲ್ಲಿ ಏನಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿ ನಿಧನರಾದರು ಅವರು ಮಾತನಾಡಿದರು.
ರಿಮೋಟ್ ಕಂಟ್ರೋಲ್ ಸಿಎಂ ಎಂದಿರುವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿ, ಡಿಕೆಶಿ ಅವರು ಸಿಎಂ ಆಗಲು ಒದ್ದಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿಯೇ ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಟಾಂಗ್ ನೀಡಿದರು.
ಮೊದಲು ಅವರ ಪ್ಲೇಟ್ ನಲ್ಲಿ ಏನಿದೆ ಎನ್ನುವುದನ್ನು ನೋಡಿಕೊಳ್ಳಲಿ, ಆಮೇಲೆ ಇನ್ನೊಬ್ಬರ ಪ್ಲೇಟ್ ನಲ್ಲಿರುವ ಅನ್ನ ನೋಡಲಿ ಎಂದು ತಿರುಗೇಟು ನೀಡಿದರು.
ಜಿಎಸ್ ಟಿ ರಾಜ್ಯದ ಪಾಲು ಕುರಿತು ಪ್ರತಿಕ್ರಿಯಿಸಿದ ಸಿಎಂ, ಜಿಎಸ್ ಟಿ ಸಂವಿಧಾನಾತ್ಮಕವಾಗಿ ಇರುವಂಥದ್ದು. ಎಲ್ಲಾ ಪಕ್ಷಗಳು, ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಸಂಸತ್ ನಲ್ಲಿ ಪಾಸ್ ಮಾಡಿರುವಂತಹ ಆ್ಯಕ್ಟ್ ಎಂದು ಹೇಳಿದರು.
ಐದು ವರ್ಷ ಅಂತ ಪಿಕ್ಸ್ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಕಲೆಕ್ಷನ್ ಆಗಿರಲಿಲ್ಲ. ಸಂಗ್ರಹ ಮಾಡಿದ ಮೇಲೆ ಪಾಲು ಕೊಡಬೇಕು ಅಂತ ಇದೆ.
ಸಂಗ್ರಹವಾಗದಿದ್ದರೂ ಕೂಡ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ನಾವು ಕೂಡ ಎರಡು ವರ್ಷ ವಿಸ್ತರಣೆ ಮಾಡುವಂತೆ ಕೇಳಿದ್ದೆವು ಆದರೆ ಕಾನೂನಿನನ್ವಯ ಆಗಲ್ಲ ಎಂದು ಹೇಳಿದ್ದಾರೆ.
ಆದರೆ ನಮಗೆ ಬರಬೇಕಾಗಿರುವ ಎಲ್ಲಾ ಬಾಕಿಗಳನ್ನು ಕೊಡುತ್ತಿದ್ದಾರೆ.ಇತ್ತೀಚೆಗೆ ಸುಮಾರು 8,800ಕೋಟಿ ರೂ.ಕೊಟ್ಟಿದ್ದಾರೆ. ಬಾಕಿ ಇರುವುದನ್ನೂ ಕೊಡುತ್ತಾರೆ ಅದರಲ್ಲೇನೂ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಾ.ಪಂ.ಜಿಪಂ ಚುನಾವಣೆ, ಬಿಬಿಎಂಪಿ ಚುನಾವಣೆ ಕುರಿತು ಪ್ರತಿಕ್ರಿಯಿಸಿ ಇದೇ 22 ರಂದು ಸುಪ್ರೀಂ ಕೋರ್ಟ್ ಗೆ ಮೀಸಲಾತಿ ವರದಿ ಕೊಟ್ಟ ನಂತರ ಫೈಲ್ ಮಾಡಿ ನಿರ್ದೇಶನ ಅನುಸಾರ ಚುನಾವಣೆ ನಡೆಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಸಿಎಂಗೆ ಸಚಿವ ಗೋವಿಂದ ಕಾರಜೋಳ, ಶಾಸಕ ಎಲ್.ನಾಗೇಂದ್ರ, ಸಿ.ಹೆಚ್.ವಿಜಯಶಂಕರ್ ಮತ್ತಿತರರು ಸಾಥ್ ನೀಡಿದರು.

