ಮೈಸೂರು: ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆ ಹಿಂದೆ ವಿಶೇಷವಾದ ಹಿನ್ನೆಲೆ ಇದೆ.
ಯಾವುದೇ ಹಬ್ಬಗಳ ಆಚರಣೆ ಕಿರಿತು ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಅರ್ಚಕರ ಸಂಘದ ಅಧ್ಯಕ್ಷ ಹಾಗೂ ಪಂಚಮುಖಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ತಿಳಿಸಿದರು.
ನಾಗ ಪಂಚಮಿ ಅಂಗವಾಗಿ ನಗರದ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಾಗರ ಮೂರ್ತಿಗಳಿಗೆ ಹಾಲೆರೆದು ಪೂಜಿಸಿದ ನಂತರ ಅವರು ಮಾತನಾಡಿದರು.
ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬವು ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ ವಾಗಿದೆ.
ನಮ್ಮ ಪೂರ್ವಜರು, ಗುರುಗಳು ಹಾಕಿಕೊಟ್ಟಪರಂಪರೆಯನ್ನು ಆಚರಣೆಯನ್ನು ಪಾಲಿಸುವುದು ಮುಂದುವರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ನಾಗದೇವರಿಗೆ ಹಾಲೆರೆಯುವುದು ನಮ್ಮ ಪರಂಪರೆ. ಹಿಂದೂ ಧರ್ಮೀಯರಿಗೆ ಪೂಜೆ ಮಾಡುವುದು ಗೊತ್ತು. ಅದರಂತೆ ಅಸಹಾಯಕರಿಗೆ ನಿರ್ಗತಿಕರಿಗೆ ಸಹಾಯ ಮಾಡುವುದೂ ಗೊತ್ತು.
ಕೆಲವರು ಹಬ್ಬಗಳ ಆಚರಣೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ ಇದು ಸರಿಯಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ನಾಗಭೂಷಣ್ ದಂಪತಿ ಹಾಗೂ ಭಕ್ತರು ಹಾಜರಿದ್ದರು.

