ಮೈಸೂರು: ತುಳಸಿಗಿಡವು ಹಿಂದೂ ಧರ್ಮೀಯರ ಅವಿಭಾಜ್ಯ ಅಂಗ, ಇದನ್ನು ಮನೆಯಲ್ಲಿ ಬೆಳೆಸಿ ಬಳಸಿದರೆ ವಿವಿಧ ಕಾಯಿಲೆಗಳು ಬರುವುದಿಲ್ಲ ಎಂದು ಮೈಸೂರು ನಗರ- ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಹೇಳಿದರು.
ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಲಿ ವತಿಯಿಂದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ಮಠದ ಆವರಣದಲ್ಲಿ ಏರ್ಪಡಿಸಿದ್ದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 351ನೇ ವರ್ಧಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಳಸಿಗಿಡ ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ ಹಾಗಾಗಿಯೇ ಅಂದಿನ ದಿನಗಳಲ್ಲೇ ರಾಯರು ತುಳಸಿ ಗಿಡದ ಮಹತ್ವವನ್ನು ಜಗಕ್ಕೆ ಸಾರಿದ್ದರು ಎಂದು ಹೇಳಿದರು.
ತುಳಸಿ ಗಿಡದ ಎಲೆಗಳನ್ನು ಬಳಸಿದರೆ ಡೆಂಘಿ ಕಾಯಿಲೆ ವಾಸಿಯಾಗುತ್ತದೆ ಎಂದು ಹೇಳಿದರು.
ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ಮಾತನಾಡಿ ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕಾರ, ಧಾರ್ಮಿಕ ಆಚರಣೆಗಳು ಇಂದಿಗೂ ಪವಿತ್ರತೆ ಉಳಿಸಿಕೊಂಡು ಜನರ ಜೀವನದಲ್ಲಿ ಹೊಸ ಚೈತನ್ಯದೊಂದಿಗೆ ಬದಲಾವಣೆಗೆ ಪ್ರೇರಣೆ ನೀಡುತ್ತಿವೆ ಎಂದು ಹೇಳಿದರು.
ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗ ಕಾಮಧೇನು,ಕಲ್ಪವೃಕ್ಷದ ರೀತಿ ನಂಬಿದ ಎಲ್ಲ ಭಕ್ತರಿಗೆ ಜಾತಿ ಭೇದವಿಲ್ಲದೇ ವರ ಕರುಣಿಸೋ ದೇವಾಂಶ ಸಂಭೂತರು ಎಂದು ತಿಳಿಸಿದರು.
ಇಂತಹ ರಾಯರ ಜೀವನ ಚರಿತ್ರೆ ಓದಿ ಕೃತಾರ್ಥರಾಗಿ ಎಂದು ಭಕ್ತಾದಿಗಳಿಗೆ ಕರೆ ನೀಡಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ಶ್ರೀವತ್ಸ ,ಮೋಹನ್ ಭಟ್ ,ಪಿ ಎಸ್ ಶೇಖರ್, ಸುಚೇಂದ್ರ ,ಚಕ್ರಪಾಣಿ ,ಎಸ್ ಎನ್ ರಾಜೇಶ್ ,ಹಾಗೂ ಇನ್ನಿತರರು ಹಾಜರಿದ್ದರು.

