ಗಣಪನ ಜತೆ ಪುನೀತ್ ಮೂರ್ತಿಗಳು:ಅಭಿಮಾನಿಗಳು ಫಿದಾ

ಮೈಸೂರು: ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು  ಸಾಂಸ್ಕೃತಿಕ ನಗರಿಯಲ್ಲಿ ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ‌,ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ರೆಂಡ್ ಆರಂಭವಾಗಿರುವುದು ವಿಶೇಷ.

ಪುನೀತ್ ರಾಜ್ ಕುಮಾರ್ ಮೇಲಿನ ಪ್ರೀತಿ ಇದೀಗ ಗೌರಿ ಗಣೇಶ ಹಬ್ಬದಲ್ಲೂ ಕಂಡು ಬರುತ್ತಿದೆ.

ಹೆಬ್ಬಾಳದ ಸೂರ್ಯ ಬೇಕರಿ ಬಳಿ ಗಣಪತಿ ಮೂರ್ತಿ ಜೊತೆ ಅಪ್ಪು ಮೂರ್ತಿಯನ್ನು ತಯಾರಿಸಲಾಗುತ್ತಿದ್ದು, ಕಲಾವಿದ ಸುನಿಲ್ ಕುಮಾರ್ ಎಂಬವರು ಮೂರ್ತಿ ಸಿದ್ಧಪಡಿಸುತ್ತಿದ್ದಾರೆ.

ಜೇಡಿಮಣ್ಣಿನಿಂದ ಮೂರ್ತಿ ಸಿದ್ದಪಡಿಸಲಾಗುತ್ತಿದ್ದು, ಪರಿಸರ ಸ್ನೇಹಿಯಾಗಿದೆ.

ಸುನೀಲ್ ಅವರು ನೂರಕ್ಕಿಂತಲೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದು ಪುನೀತ್ ಜೊತೆ ಇರುವ ಗಣಪನ ಮೂರ್ತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ಗಣಪನ ಜೊತೆ ಪುನೀತ್ ಅವರ ಮೂರ್ತಿಯನ್ನು ಮಾಡಿದ್ದು ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ.

ಮತ್ತಷ್ಟು ಸ್ಪೂರ್ತಿಯಿಂದ ಈ ಬಾರಿ ಗಣೇಶನ ಹಬ್ಬವನ್ನು ಆಚರಿಸುತ್ತಾರೆ ಎನ್ನುತ್ತಾರೆ ಕಲಾವಿದ ಸುನೀಲ್. 

ಮೈಸೂರಿನಲ್ಲಿ ಗಣಪನ ಜೊತೆ ಪುನೀತ್ ನೋಡಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ.

ಗಣಪತಿ ಜೊತೆ ನಿರ್ಮಾಣಗೊಂಡಿರುವ ಪುನೀತ್  ಮೂರ್ತಿಗೆ ಬೇಡಿಕೆ ಹೆಚ್ಚಿದೆ.