ಮೈಸೂರು: ಜೆಡಿಎಸ್ ಪಕ್ಷದಿಂದ ಶಾಸಕ ಜಿ.ಟಿ.ದೇವೇಗೌಡ ದೂರವಾಗುತ್ತಿದ್ದಾರೆ ಎಂದು ಮಾತು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ.
ಇದೀಗ ಜೆಡಿಎಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಿಂದ ಜಿ.ಟಿ.ದೇವೇಗೌಡರನ್ನು ಕೈಬಿಡಲಾಗಿದೆ.
ಇದನ್ನೆಲ್ಲಾ ನೋಡಿದರೆ ಜಿಟಿಡೀನೆ ಹೊರ ಹೋಗಿದಾರಾ ಅಥವಾ ಪಕ್ಷವೇ ಹೊರಹಾಕಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಇತ್ತೀಚೆಗೆ ಜಿ.ಟಿ.ದೇವೇಗೌಡರ ಹೆಸರು ಜೆಡಿಎಸ್ ಅಧಿಕೃತ ವೆಬ್ ಸೈಟಿನಲ್ಲಿ ಕಂಡು ಬರುತ್ತಿಲ್ಲ!.
ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪಕ್ಷ ಸಂಘಟನೆಯ ಹೆಸರಿನಲ್ಲಿ ಅಧಿಕೃತ ವೆಬ್ ಸೈಟ್ ರಚನೆಗೊಂಡಿದೆ.
ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರು, ಕಛೇರಿ ವಿಳಾಸದ ಜೊತೆಗೆ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಆದರೆ ಆ ವೆಬ್ ಸೈಟಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಹೆಸರನ್ನು ಕೈಬಿಡಲಾಗಿದೆ.
ಪಕ್ಷದ ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಕುರಿತು ಈ ವೆಬ್ ಸೈಟ್ ನಲ್ಲಿ ಸಣ್ಣ ಮಾಹಿತಿಯೂ ಇಲ್ಲ.
ಇದನ್ನು ನೋಡಿದರೆ ಜಿ.ಟಿ.ದೇವೇಗೌಡರು ಜೆಡಿಎಸ್ ನಿಂದ ಮತ್ತಷ್ಟು ದೂರವಾಗಿರುವುದು ಸ್ಪಷ್ಟವಾಗುತ್ತಿದೆ.

