ಗೌರಿ ಹಬ್ಬ:700ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ, ಬಾಗಿನ ವಿತರಣೆ

ಮೈಸೂರು: ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನ ವತಿಯಿಂದ ಗೌರಿ ಹಬ್ಬದ ಪ್ರಯುಕ್ತ 700ಕ್ಕೂ ಹೆಚ್ಚು ಮಹಿಳೆಯರಿಗೆ, ಬಡವರಿಗೆ ಸೀರೆ, ಬಾಗಿನ ಮತ್ತು ಪ್ರಸಾದ  ವಿತರಿಸಲಾಯಿತು.  
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್  ಮಾತನಾಡಿ, ವಿದೇಶಿಯರ ದಾಳಿಗಳಿಂದ ಪ್ರಪಂಚದ ಅದೆಷ್ಟೋ ಸಂಸ್ಕೃತಿಗಳು ನಾಶವಾಗಿವೆ. ಆದರೆ ಭಾರತೀಯ ಸಂಸ್ಕೃತಿ ತಾಯಂದಿರ ಕಾಣಿಕೆಯಿಂದ ಇಂದಿಗೂ ಸುಭದ್ರವಾಗಿದೆ ಎಂದು ಹೇಳಿದರು.‌
 ಹಬ್ಬ - ಹರಿದಿನಗಳು ನಮ್ಮ ಸಂಸ್ಕೃತಿಯ ಮೂಲ ಆಧಾರಗಳಾಗಿವೆ ಎಂದು ಹೇಳಿದರು.
ದೇವಸ್ಥಾನದ ಸಂಸ್ಥಾಪಕರಾದ ಎಚ್. ಜಿ. ಗಿರಿಧರ್ ಮಾತನಾಡಿ ನಮ್ಮ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಸ್ಥಳೀಯರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ, ಬಾಂಧವ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.
ಬಿಜೆಪಿಯ ವಿಭಾಗ ಪ್ರಭಾರಿ ಮೈ. ವಿ. ರವಿಶಂಕರ್, ಮುಖಂಡರಾದ ಬಿ. ಪಿ. ಮಂಜುನಾಥ್, ಅನಿಲ್ ಥಾಮಸ್, ನಗರ ಪಾಲಿಕೆ ಸದಸ್ಯರಾದ ಉಷಾ ಲೋಲಪ್ಪ,ಅಶ್ವಿನಿ ಶರತ್, ಆನಂದ್, ಮಧು ಪ್ರಸಾದ್, ನಾರಾಯಣ ಲೋಲಪ್ಪ,ಶರತ್  ಕುಮಾರ್, ಶಾಂತ, ಕೆ. ಜೆ. ರಮೇಶ್, ಸ್ಮಾರ್ಟ್ ಮಂಜು, ಲೋಹಿತ್,ವಿನೋದ್, ಶ್ರೀನಿವಾಸ ರಾಜ್ ಅರಸ್  ಮತ್ತಿತರರು ಹಾಜರಿದ್ದರು.