ಮೈಸೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದೆ.
ಅಲಯನ್ಸ್ ಏರ್ ಕಂಪನಿಯ ವಿಮಾನ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕೃತವಾಗಿ ಚಾಲನೆ ನೀಡಿದರು.
ಈ ಮಾರ್ಗದಲ್ಲಿ ಈಗಾಗಲೇ ಇಂಡಿಗೋ ಕಂಪನಿಯ ವಿಮಾನ ಸಂಚರಿಸುತ್ತಿದೆ.
ಪ್ರಯಾಣಿಕರಿಂದ ಬೇಡಿಕೆ ಹೆಚ್ಚಿರುವುದರಿಂದ ಮತ್ತೊಂದು ವಿಮಾನ ಹಾರಾಟ ಆರಂಭಿಸಲಾಗಿದೆ. ವಾರದಲ್ಲಿ ಬುಧವಾರ, ಶುಕ್ರವಾರ ಹಾಗೂ ಭಾನುವಾರ ಚೆನ್ನೈಗೆ ವಿಮಾನ ಹಾರಾಟ ನಡೆಸಲಿದೆ.
ಬೆಳಿಗ್ಗೆ 11ಗಂಟೆಗೆ ಬಂದು 11.30ಕ್ಕೆ ತೆರಳುತ್ತದೆ. ಎರಡೂ ನಗರಗಳ ನಡುವೆ ಉದ್ದಿಮೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಇದರಿಂದ ಸಹಕಾರಿಯಾಗಲಿದೆ.
ವಿಮಾನಕ್ಕೆ ದಿ ಎಸ್ಟೇಟ್ ಹಾಗೂ ಯಂಗ್ ಐಲ್ಯಾಂಡ್ ಅಂಡ್ ರೆಸಾರ್ಟ್ ಮಾಲೀಕ ಮಹೇಶ್ ಶೆಣೈ ಮತ್ತು ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎ.ಜಯಕುಮಾರ್ ನಿಶಾನೆ ತೋರಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ಉಪಸ್ಥಿತರಿದ್ದರು.

