ಮೈಸೂರು: ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾದುದು ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶೆಣೈ ಹೇಳಿದರು.
75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ ಗಣೇಶ ಹಬ್ಬದ ಅಂಗವಾಗಿ ಕಾಮಾಕ್ಷಿ ಆಸ್ಪತ್ರೆ ವತಿಯಿಂದ
250ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರನೀಡಿ ಅವರು ಮಾತನಾಡಿದರು.
ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ಶ್ರಮಿಸುತ್ತಿರುವ ಚಾಲಕರು ಬಡವರ ಬಂಧುಗಳಾಗಿದ್ದಾರೆ. ಅಂತಹ ಸೇವೆಗೆ ಬೆಲೆಕಟ್ಟಲಾಗದು ಎಂದು ಹೇಳಿದರು.
ಮಧ್ಯರಾತ್ರಿಯಲ್ಲಿ ದೂರದ ಊರುಗಳಿಂದ ಬರುವ ಗ್ರಾಮೀಣಭಾಗದ ಜನರನ್ನು ಸುರಕ್ಷಿತವಾಗಿ ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾಯಕ ಮಾಡುತ್ತಿದ್ದಾರೆ.
ಅಂತಹ ಚಾಲಕರಿಗೆ ನಾನು ಕೈ ಮುಗಿದು ಧನ್ಯವಾದ ಸಲ್ಲಿಸುತ್ತೇನೆ ಎಂದು ಮಹೇಶ್ ಶಣೈ ಹೇಳಿದರು.
ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವಜನಿಕ ಗಣೇಶೋತ್ಸವ ನೀಡಿದ ಕೊಡುಗೆ ಅಪಾರ ಎಂ ತಿಳಿಸಿದರು.
ಬಹುತೇಕ ಹಬ್ಬಹರಿದಿನಗಳನ್ನು ಕುಟುಂಬಕ್ಕೆ ಸೀಮಿತವಾಗಿ ಆಚರಿಸುತ್ತೇವೆ ಆದರೆ ಕೆಲವು ಧಾರ್ಮಿಕ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸಿದರೆ ಅದರಿಂದ ಸಮಾಜಕ್ಕೊಂದು ಅದ್ಭುತ ಶಕ್ತಿ ಲಭಿಸುತ್ತದೆ.
ಅದು ರಾಷ್ಟ್ರದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಆ ಮೂಲಕ ಭಾರತ ಜಗತ್ತಿನ ಬಲಿಷ್ಟ ರಾಷ್ಟ್ರವಾಗಿ ಮೇಲೆದ್ದು ನಿಲ್ಲುತ್ತದೆ ಎಂದು ಹೇಳಿದರು.
ಅಖಿಲೇಶ್ ,ಬಿಜೆಪಿ ಮುಖಂಡರಾದ ಪರಮೇಶ್ ಗೌಡ,ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು, ಗಣೇಶ್,ಶ್ಯಾಮ್,ಆಟೋ ಚಾಲಕರಾದ ಅಶ್ವಥ್, ಮನು, ಪ್ರದೀಪ್, ನವೀನ ಮಹದೇಶ ಮತ್ತಿತರರು ಹಾಜರಿದ್ದರು.

