ಮೇಯರ್ ಚುನಾವಣೆ: ಜೆಡಿಎಸ್ ಜತೆ ಸಖ್ಯ -ಎಲ್.ನಾಗೇಂದ್ರ

ಮೈಸೂರು: ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷದ ಜೊತೆಗೆ ನಾವು ಮೈತ್ರಿಗೆ ಸಿದ್ಧ ಎಂದು ಹೇಳುವ ಮೂಲಕ ಜೆ ಡಿ ಎಸ್ ಜತೆ ಸಖ್ಯ ಬೆಳೆಸುವುದನ್ನು ಶಾಸಕ ಎಲ್.ನಾಗೇಂದ್ರ ಪರೋಕ್ಷವಾಗಿ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ನಂತರ ವರಿಷ್ಠರು ಏನು ಹೇಳುತ್ತಾರೆ ಅದನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದರು.

ಜೆಡಿಎಸ್ ಜತೆ ಬಿಜೆಪಿ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಈ ಸಲ ಚುನಾವಣೆ ಏನು ಎತ್ತ ಅಂತ ತಿಳಿಯಲಿದೆ‌ ಎಂದರು.

ಕಳೆದ ಬಾರಿ ಜೆಡಿಎಸ್ ನವರು ನಮಗೆ ಮತ ಹಾಕಿಲ್ಲ.ಈಗ ನಾವೇನು ಜೆಡಿಎಸ್ ಗೆ ಮತ ಹಾಕುವ ಪ್ರಮೇಯ ಬರಲ್ಲ. ಹೊಂದಾಣಿಕೆ ಆದರೂ ಆಗಬಹುದು, ಹೇಳಲಿಕ್ಕಾಗಲ್ಲ ಎಂದರು.

ನಾವು ಕಾಂಗ್ರೆಸ್ ಹೊರತುಪಡಿಸಿ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ನಮಗೆ ಕಾಂಗ್ರೆಸ್ ನೇರ ವೈರಿ.

ಜೆಡಿಎಸ್ ಜೊತೆ ನಾವು ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಂಡು ಬಂದಿದ್ದೇವೆ. ರಾಜ್ಯದವರು ನಮಗೆ ಸೂಚನೆ ಕೊಟ್ಟಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಅದರಲ್ಲಿ ಬೇರೆ ಮಾತಿಲ್ಲ ಎಂದು ನಾಗೇಂದ್ರ ಸ್ಪಷ್ಟಪಡಿಸಿದರು.