ಸರ್ಕಾರದ ನಡೆ ಬಗ್ಗೆ ಜನರಲ್ಲಿ ಅತೀ ಕೆಟ್ಟ ಅಭಿಪ್ರಾಯವಿದೆ -ಎಚ್ ಡಿ ಕೆ

ಮೈಸೂರು: ಗುತ್ತಿಗೆದಾರ ಸಂಘದಿಂದ ನಿರಂತರವಾಗಿ ಚರ್ಚೆ ನಡೆಯುತ್ತಿದ್ದು, ಸಾರ್ವಜನಿಕರವಾಗಿ ಸರ್ಕಾರದ ನಡೆ ಬಗ್ಗೆ ಅತ್ಯಂತ ಕೆಟ್ಟ ಅಭಿಪ್ರಾಯವಿದೆ ಎಂದು ಮಾಜಿ ಸಿಎಂ ‌ಎಚ್ ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ 40% ಕಮೀಷನ್ ವಿಚಾರವಾಗಿ ಪ್ರತಿಕ್ರಿಯಿಸಿದರು.

ಒಂದೊಂದು ಇಲಾಖೆಯಲ್ಲಿ ,ಒಂದೊಂದು ಸಂದರ್ಭದಲ್ಲಿ ಒಂದೊಂದು ತೀರ್ಮಾನ ಸರ್ಕಾರದ ಆಡಳಿತ ಯಂತ್ರದಲ್ಲಿ ದುರ್ಬಳಕೆಯಾಗುತ್ತಿದ್ದು ಈ ವಿಚಾರದಲ್ಲಿ ನನ್ನ ಮನಸಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲೂ ಕೂಡ ಈ ಪರ್ಸಂಟೆಜ್ ಇತ್ತು,ಕೆಲವು ಪುಸ್ತಕಗಳಲ್ಲಿ ಬ್ರಿಟಿಷ್ ವ್ಯವಸ್ಥೆಯಲ್ಲೂ ಇತ್ತು ಎಂಬುದು ಗೊತ್ತಾಗಿದೆ.ಸ್ವಾತಂತ್ರ್ಯ ನಂತರ ಹಲವು ರೀತಿ ಪರ್ಸಂಟೇಜ್ ನಡೆಯುತ್ತಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಪರ್ಸಂಟೇಜ್  ಸ್ವಲ್ಪ ಪ್ರಮಾಣದಲ್ಲಿತ್ತು,ಆಗಿನ ಮಟ್ಟದಲ್ಲಿ ಶಾಸಕ‌ರ ಮಟ್ಡದಲ್ಲಿ ಇತ್ತು.ಆವತ್ತಿನ ವ್ಯವಸ್ಥೆಯಲ್ಲಿ ಫಂಡ್ ರೈಸಿಂಗ್ ಅಂತ ಇಟ್ಡುಕೊಳ್ಳಲಾಗಿತ್ತು.

ಅಬಕಾರಿ ಮೂಲಕ ಸರ್ಕಾರ ಹಣ ಸಂಗ್ರಹ ಮಾಡುತ್ತಿತ್ತು.ಬಳಿಕ ಎಜುಕೇಷನ್ ಶಿಕ್ಷಣ ಸಂಸ್ಥೆಗಳ‌ ಮೂಲಕ ನಡೆಯುತ್ತಿತ್ತು.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೂಡ ವ್ಯವಸ್ಥೆ ಇದೆ ಎಂದು ಎಚ್ ಡಿಕೆ ಹೇಳಿದರು.

ಕೆಲಸವಾದಾಗ ಕೆಲವರು ತಾವಾಗಿಯೇ ಸಂತೋಷದಿಂದ ಕೊಟ್ಟು ಹೋಗುತ್ತಿದ್ದರು. ಈಗ ಕಿರುಕುಳ‌ನೀಡಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದು ವ್ಯವಸ್ಥೆಯ ದೋಷ ಆ ವ್ಯವಸ್ಥೆ ತಂದವರು ನೀವೇ.ಇದು ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿತ್ತು ಆದರೆ ಬಿಜೆಪಿ ಸರಕಾರ ಬಂದ ಮೇಲೆ ಈ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಬಿಜೆಪಿ ಅವರಿಗೆ ಆತ್ಮಸಾಕ್ಷಿ ಇದ್ದರೆ ದೇಶಭಕ್ತಿ, ದೇಶ ಕಾಯುವವರಿದ್ದರೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ನಾನು ಸಿಎಂ ಆಗಿದ್ದಾಗ ಈ ಸಂಸ್ಕೃತಿ ಇರಲಿಲ್ಲ,ಕೆಂಪಣ್ಣ ಅವರು ಹೇಳಿರುವಂತೆ ಆಡಳಿತ ನಡೆಯುತ್ತಿದೆ ಎಂದು ಟೀಕಿಸಿದರು.

ದೇವೇಗೌಡರ ರೀತಿಯಲ್ಲಿಯೇ ನಾವು ಆಡಳಿತ ಮಾಡಿದ್ದೇವೆ.ಆದರೆ ಈಗ ಮರಳು ದಂಧೆ, ಕ್ವಾರೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಲ್ಲಾ ಪಕ್ಷದ ಶಾಸಕರು ಕೂಡ ದಂಧೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೆಂಪಣ್ಣ ಅವರು ಹೇಳಿರುವಂತೆ ನಾನು ಸಿಎಂ ಆಗಿದ್ದಾಗಲೂ ಹಲವರು ಹಣ ಪಡೆದಿದ್ದಾರೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಗುತ್ತಿಗೆದಾರರಲ್ಲಿ ನನ್ನ ಮನವಿ ಏನೆಂದರೆ ಆರು ತಿಂಗಳ‌ಕಾಲ ನೀವು ಬಾಯ್ಕಾಟ್ ಮಾಡಿ ಸರ್ಕಾರಿ ಟೆಂಡರ್ ಗುತ್ತಿಗೆ ನಿಲ್ಲಿಸಿ ಆಗ ಎಲ್ಲರಿಗೂ ಇದೊಂದು ಪಾಠ ಆಗಲಿದೆ ಎಂದು ಸಲಹೆ ನೀಡಿದರು.

ಹಳ್ಳಿ ಹಳ್ಳಿಗಳಲ್ಲೂ ಕೂಡ ಈವಾಗ ಗುತ್ತಿಗೆದಾರರು ಹುಟ್ಟಿಕೊಂಡಿದ್ದಾರೆ

ಕೆಲಸವನ್ನೇ ಮಾಡದೆ ಹಲವರು ದುಡ್ಡು ಹೊಡೆಯುತ್ತಿದ್ದಾರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆ ಎಲ್ಲವೂ ಕುಲಗೆಟ್ಟು ಹೋಗಿದೆ ಎಂದು ಗುಡುಗಿದರು.

ಅರ್ಕಾವತಿ ಬಗ್ಗೆಯೂ ಭ್ರಷ್ಟಾಚಾರ ಮಾಡಿದ್ದಾರೆ. ಕೆಂಪಣ್ಣ ವರದಿ ಎಲ್ಲಿಗೆ ಹೋಯ್ತು ಈವಾಗ ನ್ಯಾಯಾಂಗ ತನಿಖೆ ಕೇಳುತ್ತಿದ್ದಾರೆ.

ಎಷ್ಟು ನ್ಯಾಯಾಂಗ ತನಿಖೆ ನಡೆಸಿ ಶಿಕ್ಷೆ ಆಗಿದೆ ಇದಕ್ಕೆ ಎಂದಿಗೂ ಕೊನೆಯಿಲ್ಲ ಒಬ್ಬರು ಹೊಡೆದಂಗೆ ಮಾಡು, ಒಬ್ಬರು ಅತ್ತಂಗೆ ಮಾಡು ಅನ್ನೋ ಸ್ಥಿತಿ ಇದೆ ಎಂದರು.

ಸಂತೋಷ್ ಹೆಗ್ಡೆ ನ್ಯಾಯಮೂರ್ತಿ ‌ಆಗಿದ್ದಾಗ ಗೋಡೆ ಕುಸಿದು ಮಗು ಸತ್ತಿತ್ತು ಆ ಪ್ರಕರಣದಲ್ಲಿ ಯಾರಿಗೆ ಶಿಕ್ಷೆ ನೀಡಿದರು

ಸಿದ್ದರಾಮಯ್ಯ ಅವರ ಕಾಲದಲ್ಲಿ ಪರ್ಸಂಟೇಜ್ ಎಷ್ಟಿತ್ತು ಎಂಬುದು ಗೊತ್ತಿದೆ ಎಂದು ವ್ಯಂಗ್ಯ ವಾಡಿದರು ಎಚ್ ಡಿಕೆ.

ಮೂರು ಜನ ಬಿಟ್ಟು ಹೋದವರಲ್ಲಾ ಅವರಿಗೂ ಹಣ ಹೋಗ್ತಾ ಇತ್ತು. ಕುಮಾರಸ್ವಾಮಿ ಸರ್ಕಾರ ಉರುಳಿಸಲು ಇದೇ ಕಾರಣ ಎಂದು ಎಂದರು.