ನಮ್ಮ ನೆಲದ ಕಾನೂನಿನಂತೆ ತನಿಖೆ ನಡೆಯಲಿದೆ -ಆರಗ ಜ್ಞಾನೇಂದ್ರ

ಬೆಂಗಳೂರು: ಚಿತ್ರದುರ್ಗದ ಮುರುಘಾ ಶ್ರೀಗಳ ತನಿಖೆ ನಮ್ಮ ನೆಲದ ಕಾನೂನಿನಂತೆ ನಡೆಯಲಿದೆ ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ತನಿಖೆ ವೇಳೆ  ಯಾವುದೇ ರೀತಿಯಲ್ಲಿ ಸರಕಾರದ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

ಪೋಕ್ಸೋ ಕೇಸ್ ನಲ್ಲಿ, ಪೊಲೀಸರಿಂದ,  ಬಂಧಿಸಲ್ಪಟ್ಟಿರುವ ಮುರುಘಾಶ್ರೀಗಳು ತನಿಖೆಗೆ ಸಹಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತನಿಖೆ ನಡೆಸಲು ಪೊಲೀಸರು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ‌ ಅವರ ಮೇಲೆ ಯಾವುದೇ ಒತ್ತಡ ಇರುವುದಿಲ್ಲ,ಯಾವುದೇ ಊಹಾಪೋಹಗಳನ್ನು ನಂಬಬಾರದು ಎಂದು ಆರಗ‌ ಜ್ಞಾನೇಂದ್ರ ಮನವಿ ಮಾಡಿದರು.