ಬೆಂಗಳೂರು: ಬಿಜೆಪಿ ಹಮ್ಮಿಕೊಂಡಿರುವುದು ಜನಸ್ಪಂದನ ಸಮವೇಶವಲ್ಲ ಕಮಿಷನ್ ಸಮಾವೇಶ ಎಂದು ಕಾಂಗ್ರೆಸ್ ಕಿಡಿಕಾರಿದೆ.
.40ರಷ್ಟು ಕಮಿಷನ್ ಹೊಡೆದ ಪಾಪದ ಹಣದಲ್ಲಿ ಈ ಸಮಾವೇಶ ಮಾಡುತ್ತಿದೆ.ಅಲ್ಲಿ ಯಾವ ಸಾಧನೆ ಹೇಳಿಕೊಳ್ಳುತ್ತೀರಾ ಬೊಮ್ಮಾಯಿಯವರೆ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಪ್ರಶ್ನಿಸಿದೆ.
ಮ್ಮದೇ ಪಕ್ಷದ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್‍ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಸಮಾವೇಶದಲ್ಲಿ ಹೇಳಿಕೊಳ್ಳುತ್ತೀರಾ ಎಂದು ಕಿಡಿಕಾರಿದೆ.
ಷ್ಟಾಚಾರದ ಬಗ್ಗೆ ಹೈಕೋರ್ಟ್ ವ್ಯಕ್ತ ಪಡಿಸಿರುವ ಅಸಮದಾನವನ್ನು ಉಲ್ಲೇಖಿಸಿ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.
ಮ್ಮ ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ ಎಂದು ಗುತ್ತಿಗೆದಾರರು, ಜನಸಾಮಾನ್ಯರು ಪ್ರಶ್ನೆ ಮಾಡಿದ್ದಾರೆ.ಈಗ ಹೈಕೋರ್ಟ್ ಕೂಡ ಪ್ರಶ್ನೆ ಮಾಡಿದೆ.
ರ್ಕಾರದ ಶೇ.40ರಷ್ಟು ಕಮಿಷನ್ ಬಗ್ಗೆ ಚರ್ಚೆಗಳು ವ್ಯಾಪಕವಾಗಿವೆ. ಭಾರೀ ಭ್ರಷ್ಟಾಚಾರದಂತಹ ನಾಚಿಕೆಗೇಡಿನ ಸಂಗತಿ ಇಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿರಾ ಎಂದು ಗೇಲಿ ಮಾಡಿದೆ.
ರ್ಕಾರದ ಸ್ಪಂದನೆ ಇಲ್ಲದೆ ಜನರ ರೋಧಿ ತ್ತಿದ್ದಾರೆ.ಶಾಸಕ ಅರವಿಂದ್ ಲಿಂಬಾವಳಿ, ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ಜನರ ನಿಂದನೆ ನಡೆದಿದೆ.
ಳೆ,ಪ್ರವಾಹ, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಜನರ ವೇದನೆ ಪಡುತ್ತಿದ್ದಾರೆ.ಬಿಜೆಪಿ ಸಮಾವೇಶಕ್ಕೆ ಜನಸ್ಪಂದನಾ ಸಮಾವೇಶಕ್ಕಿಂತ ಜನವೇದನೆ, ಜನರೋಧನೆ ಹೆಸರುಗಳೇ ಹೆಚ್ಚು ಸೂಕ್ತ ಎಂದು ಕಾಂಗ್ರೆಸ್ ಲೇವಡಿ ಮಾಡಲಾಗಿದೆ.
ಬೆಂಗಳೂರಿಗರಿಗೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ, ನಿಮಗೆ ಸಚಿವಾಲಯ ಸ್ಥಾಪಿಸಲು ಸಾಧ್ಯವೇ ಕೊಟ್ಟ ಮಾತು ಏಕೆ ಮರೆತಿರಿ ಎಂದು ಕಟುವಾಗಿ ಪ್ರಶ್ನಿಸಿದೆ.

