ಬೆಂಗಳೂರು: ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನ ಯಾರು ಮಾಡುತ್ತಾರೆ ಎಂಬ ಚರ್ಚೆಗೆ ಉತ್ತರ ಸಿಕ್ಕಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಲಿರುವ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮ್ಮತಿಸಿದ್ದಾರೆ.
ಷ್ಟ್ರಪತಿಯವರನ್ನು ಆಹ್ವಾನಿಸಿ ಸೆಪ್ಟೆಂಬರ್ 6 ರಂದು ಮುಖ್ಯಮಂತ್ರಿಯವರು ಪತ್ರ ಬರೆದಿದ್ದರು. ಇದಕ್ಕೆ ರಾಷ್ಟ್ರಪತಿಯವರು ಸಮ್ಮತಿ ಸೂಚಿಸಿರುವುದಾಗಿ ರಾಷ್ಟ್ರಪತಿ ಭವನದಿಂದ ಮುಖ್ಯಮಂತ್ರಿ ಕಚೇರಿಗೆ ಪತ್ರ ಬಂದಿದೆ.
ಮೊದಲು ಮೈಸೂರು ದಸರಾ ಉದ್ಘಾಟನೆಗೆ ಯಾರನ್ನು ಕರೆಸಬೇಕೆಂಬ ಬಗ್ಗೆ ದಸರಾ ಸಮಿತಿ ಸಭೆ ನಡೆಸಿ ದೇಶದ ಪ್ರಥಮ ಪ್ರಜೆ ಅಂದರೆ ನೂತನ ರಾಷ್ಟ್ರಪತಿಯವರನ್ನು ಕರೆಸಬೇಕೆಂದು ತೀರ್ಮಾನಿಸಿ ಮುಖ್ಯ ಮಂತ್ರಿಗಳಿಗೆ ತಿಳಿಸಲಾಗಿತ್ತು.
ಕುರಿತು ಸಿಎಂ ಬೊಮ್ಮಾಯಿಯವರು ರಾಷ್ಟ್ರಪತಿ ಯವರಿಗೆ ಪತ್ರ ಬರೆದಿದ್ದರು.
ಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿದ್ದು ಮೈಸೂರು ದಸರಾ ಉದ್ಘಾಟನೆ ಯಾರು ಮಾಡುತ್ತಾರೆಂಬ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತರೆ ಬಿದ್ದಿದೆ.

