ಮೈಸೂರು: ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಸೆ.26ರಿಂದ 30ರವರೆಗೆ ತಾಲೂಕು ಮಟ್ಟದಲ್ಲಿ ಹಾಗೂ ಅಕ್ಟೋಬರ್ 1ರಿಂದ 3ರವರೆಗೆ ಜಿಲ್ಲಾಮಟ್ಟದಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೊದಲ ದಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಎತ್ತಿನ ಬಂಡಿಯಲ್ಲಿ ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ನಡೆಯಲಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬೆಳಿಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಜೆ.ಕೆ.ಮೈದಾನದಲ್ಲಿ ಕೃಷಿ ಸಂಬಂಧಿತ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 10.30ಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ 30ಮಳಿಗೆಗಳು, ಪಶುಪಾಲನಾ ಇಲಾಖೆಯಿಂದ 15ಸ್ಟಾಲ್ ಗಳು ಇದ್ದು ವಿವಿಧ ರೀತಿಯ ಪಶು/ಸಾಕು ಪ್ರಾಣಿಗಳ ಪ್ರದರ್ಶನ, ಮತ್ಸ್ಯಮೇಳ, ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ನಡೆಯಲಿದೆ.
ಬೆಳಿಗ್ಗೆ 11ಗಂಟೆಗೆ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು ಆಲ್ಯೂಮಿನಿಯಂ ಅಸೋಸಿಯೇಷನ್ ಸಭಾಭವನದಲ್ಲು ನಡೆಯುವ ಕಾರ್ಯಕ್ರಮವನ್ನು ಬಿ.ಸಿ.ಪಾಟೀಲ್ ಉದ್ಘಾಟಿಸಲಿದ್ದಾರೆ.
ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತರನ್ನು ಸನ್ಮಾನಿಸಲಾಗುತ್ತದೆ.
ಎರಡನೇ ದಿನ ರೈತ ದಸರಾ ಕ್ರೀಡಾಕೂಟ/ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ,
ಬೆಳಿಗ್ಗೆ 10ಗಂಟೆಗೆ ಓವಲ್ ಮೈದಾನದಲ್ಲಿ ಗೋಣಿಚೀಲದೊಳಗೆ ಕಾಲಿಟ್ಟು ಓಡುವುದು, 10.30ಕ್ಕೆ ಓವಲ್ ಮೈದಾನದಲ್ಲಿ ಗೊಬ್ಬರ ಮೂಟೆ ಹೊತ್ತು ಓಡುವುದು, 11ಗಂಟೆಗೆ ಮೂರು ಕಾಲಿನ ಓಟ ನಡೆಯಲಿದ
ರೈತ ಮಹಿಳೆಯರಿಗಾಗಿ ಬೆಳಿಗ್ಗೆ 11ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ, 12ಗಂಟೆಗೆ ಓವಲ್ ಮೈದಾನದಲ್ಲಿ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಮತ್ತಿತರ ಸ್ಪರ್ಧೆಗಳಿರಲಿವೆ
ಮೂರನೇ ದಿನ ಹಾಕಿ ಮೈದಾನದಲ್ಲಿ ಮುದ್ದುಪ್ರಾಣಿಗಳ ಪ್ರದರ್ಶನ ಸ್ಪರ್ಧೆ ನಡೆಯಲಿದೆ.
ಸಂಜೆ 5.30ಕ್ಕೆ ಜೆ.ಕೆ.ಮೈದಾನದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ.ಚೌವ್ಹಾಣ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

