ಮೈಸೂರು: ಗುರುವಾರ ಬೆಳ್ಳಂಬೆಳಿಗ್ಗೆ ದೇಶದ ಹಲವೆಡೆ ಎನ್ ಐ ಎ ಅಧಿಕಾರಿಗಳು ಎಸ್ ಡಿಪಿಐ, ಮತ್ತು ಪಿಎಫ್ ಐ ಮುಖ್ಯಸ್ಥರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ.
ಇತ್ತ ಮೈಸೂರಿನ ಉದಯಗಿರಿ ಶಾಂತಿನಗರದಲ್ಲಿರುವ ಪಿಎಫ್ ಐ ಮಾಜಿ ಅಧ್ಯಕ್ಷ ಮೌಲಾನಾ ಮಹಮ್ಮದ್ ಖಲೀಮುಲ್ಲಾ ನಿವಾಸ ಮತ್ತು ಕಛೇರಿಯ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪಿಎಫ್ ಐ ಮಾಜಿ ಅಧ್ಯಕ್ಷ ಖಲಿಮುಲ್ಲಾ ನಿವಾಸ ಹಾಗೂ ಕಛೇರಿಯ ಮೇಲೆ ಬೆಳಗಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಿದ ಎನ್ ಐ ಎ ಅಧಿಕಾರಿಗಳು ಬೆಳಿಗ್ಗೆ 6ಗಂಟೆಯ ವರೆಗೂ ಆತನ ಮನೆಯಲ್ಲಿ ಶೋಧ ನಡೆಸಿದ್ದಾರೆ.
8 ಮಂದಿ ಎನ್ ಐ ಎ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ನಂತರ ಎರಡು ಗಂಟೆಗಳ ಕಾಲ ಸಿಸಿಬಿ ಕಛೇರಿಯಲ್ಲಿ ವಿಚಾರಣೆ ನಡೆಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

