ಮೈಸೂರು: ಮೈಸೂರು ದಸರಾ ಕಾರ್ಯಕ್ರಮವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ದಸರಾ ಉದ್ಘಾಟನೆಯನ್ನು ರಾಷ್ಟ್ರಪತಿಗಳು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ದೇಶದ ರಾಷ್ಟ್ರಪತಿಯವರು ಸರ್ಕಾರಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ ಎಂದರು.
ಪ್ರತಿವರ್ಷ ಯಾವ ರೀತಿ ಸಿದ್ಧತೆಗಳನ್ನು ಮಾಡುತ್ತೇವೋ ಅದೇ ರೀತಿ ಈ ಬಾರಿಯೂ ಅರಮನೆಯಲ್ಲಿ ಸಿದ್ಧತೆಗಳನ್ನು ನಡೆಸಿದ್ದೇವೆ ಎಂದರು ಎಂದು ತಿಳಿಸಿದರು.
ನಾವು ದಸರಾವನ್ನು ಆನಂದಿಸಬೇಕು. ಎರಡು ವರ್ಷದಿಂದ ದಸರಾ ಅಂತ ಅಲ್ಲ, ಎಲ್ಲರೂ ಮನೆಯಲ್ಲಿಯೇ ಇರಬೇಕಾಗಿತ್ತು. ಈಗ ಹೊರಗಡೆ ಬರಲು ಸಮಯ ಲಭಿಸಿದೆ. ಈ ಸಮಯಕ್ಕೆ ಕೋವಿಡ್ ಪಾಠ ಕಲಿಸಿದೆ ಅಂತ ಹೇಳಬಹುದು ಎಂದು ಹೇಳಿದರು.
ಅರಮನೆಯಲ್ಲಿ ಖಾಸಗಿ ದಸರಾ ದರ್ಭಾರ್ ಪ್ರತಿ ವರ್ಷ ಹೇಗೆ ನಡೆಯುತ್ತಿತ್ತೋ ಅದೇ ರೀತಿ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಯದುವೀರ್ ಉತ್ತರಿಸಿದರು.
ಮೈಸೂರು ದಸರಾ ವಿಶ್ವವಿಖ್ಯಾತವಾದುದು, ಎಲ್ಲರೂ ಬಂದು ಆನಂದಿಸಬೇಕು ಎಂದು ಮನವಿ ಮಾಡಿದರು.
ಎರಡುವರ್ಷದ ಬಳಿಕ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಇದೇ ರೀತಿ ಮುಂದುವರಿಯಲಿ ಎಂಬುದು ನಮ್ಮ ಪ್ರಾರ್ಥನೆ ಎಂದರು.
ಇದೇ ವೇಳೆ ಶರನ್ನವರಾತ್ರಿ ಹಾಗೂ ದಸರಾ ಶುಭಾಶಯಗಳನ್ನು ನಾಡಿನ ಜನತೆಗೆ ಯದುವೀರ್ ಒಡೆಯರ್ ತಿಳಿಸಿದರು.

